alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಗೆ ಪೊರಕೆ ಗಿಫ್ಟ್ ಮಾಡಲು ವ್ಯಾಪಾರಿಯ ತವಕ

ಕೋಟಾದ ಪೊರಕೆ ವ್ಯಾಪಾರಿಯೊಬ್ಬ ಕಳೆದ 2 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ಕಾಯುತ್ತಿದ್ದಾನೆ. ಮೋದಿ ಅವರಿಗೆ 2 ಪೊರಕೆಗಳನ್ನು ಉಡುಗೊರೆಯಾಗಿ ಕೊಡಬೇಕು ಅನ್ನೋದು ಅವರ ಆಸೆ. ಮೋದಿ ಸರ್ಕಾರ ಜಾರಿಗೆ ತಂದಿರುವ ಸ್ವಚ್ಛ ಭಾರತ ಅಭಿಯಾನದಿಂದ 35 ವರ್ಷದ ರಾಹುಲ್ ಜೈನ್ ಪ್ರೇರಣೆ ಪಡೆದಿದ್ದಾರೆ.

8.6 ಅಡಿ ಎತ್ತರ ಹಾಗೂ 3 ಇಂಚು ಅಗಲದ ಎರಡು ಪೊರಕೆಗಳನ್ನು ರಾಹುಲ್ ತಯಾರಿಸಿದ್ದಾರೆ. ಅದಕ್ಕೆ ನಮೋ ಬ್ರೂಮ್ಸ್ ಅಂತಾ ಹೆಸರಿಟ್ಟಿದ್ದು, ಒಂದು ಪೊರಕೆಯ ಬೆಲೆ 850 ರೂಪಾಯಿ. ಪೊರಕೆಯ ಎರಡೂ ಭಾಗಗಳಲ್ಲಿ ಸ್ವಚ್ಛ ಭಾರತ ಅಭಿಯಾನದ ಸ್ಲೋಗನ್ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಅಂತಾ ಬರೆಯಲಾಗಿದೆ.

ಇದು ಜಗತ್ತಿನ ಅತಿ ದೊಡ್ಡ ಪೊರಕೆ ಅಂತಾ ರಾಹುಲ್ ಹೇಳಿಕೊಂಡಿದ್ದಾರೆ. ಲಿಮ್ಕಾ ದಾಖಲೆ ಮಾಡುವ ಆಸೆ ಹೊಂದಿದ್ದಾರೆ. 2015ರಲ್ಲಿ ಪಿಎಂಓಗೆ ಕರೆ ಮಾಡಿದ್ದ ರಾಹುಲ್, ಪ್ರಧಾನಿ ಭೇಟಿಗೆ ಅವಕಾಶ ಕೇಳಿದ್ದರು. ಆದ್ರೆ ಇಮೇಲ್ ಕಳಿಸುವಂತೆ ಕಚೇರಿ ಸಿಬ್ಬಂದಿ ತಿಳಿಸಿದ್ದರಂತೆ. ಇದುವರೆಗೂ ಇಮೇಲ್ ಗೆ ಪ್ರತಿಕ್ರಿಯೆ ಬಂದಿಲ್ಲ ಅಂತಾ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...