alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 2 ಗಂಟೆಗಳಲ್ಲಿ ನಿರ್ಮಾಣವಾಗುತ್ತೆ ಥರ್ಮಕೋಲ್ ಟಾಯ್ಲೆಟ್…!

‘ಬಯಲು ಶೌಚ ಮುಕ್ತ’ ಭಾರತವನ್ನಾಗಿ ಮಾಡಬೇಕೆಂದು ನಮ್ಮ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಲೇ ಇವೆ. ಆದರೆ ಇಲ್ಲೊಬ್ಬ ಥರ್ಮಕೋಲ್ ನಿಂದ ಟಾಯ್ಲೆಟ್ ನಿರ್ಮಿಸಿ ಈ ಕಾರ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ.

ಪುಣೆಯ ರಾಮದಾಸ್ ಮಾನೆ ಎನ್ನುವವರು ಥರ್ಮಕೋಲ್ ನಿಂದ ಶೌಚಾಲಯ ನಿರ್ಮಿಸುತ್ತಿದ್ದು ಅದಕ್ಕೆ ಸಿಮೆಂಟ್ ಕೋಟಿಂಗ್ ಹಾಕಲಾಗುತ್ತದೆ. ಕೇವಲ 2 ಗಂಟೆಗಳಲ್ಲಿ ತಯಾರಾಗುವ ಈ ಥರ್ಮಕೋಲ್ ಟಾಯ್ಲೆಟ್ ದೇಶಾದ್ಯಂತ ಸುಮಾರು 22 ಸಾವಿರ ಸಂಖ್ಯೆಯಲ್ಲಿ ಪೂರೈಕೆಯಾಗಿದೆ. ಅಲ್ಲದೇ ಇದನ್ನು ಸುಮಾರು 45 ದೇಶಗಳಿಗೂ ಪೂರೈಕೆ ಮಾಡುತ್ತಿದ್ದಾರೆ.

ಜೊತೆಗೆ ಶೌಚಾಲಯ ಇಲ್ಲದ ಮನೆಗಳ ಹೆಣ್ಣುಮಕ್ಕಳಿಗೆ ಅವರ ಮದುವೆಯಲ್ಲಿ ಥರ್ಮಕೋಲ್ ಟಾಯ್ಲೆಟ್ ಅನ್ನೇ ಉಡುಗೊರೆಯಾಗಿ ನೀಡುತ್ತಿದ್ದು, ಈವರೆಗೂ ಸುಮಾರು 25 ಹೆಣ್ಣುಮಕ್ಕಳಿಗೆ ಈ ಗಿಫ್ಟ್ ನೀಡಿದ್ದಾಗಿ ಮಾನೆ ತಿಳಿಸಿದ್ದಾರೆ.

ಈ ಆವಿಷ್ಕಾರದಿಂದ ಲಿಮ್ಕಾ ದಾಖಲೆ ಬರೆದಿರುವ ಮಾನೆಯವರಿಗೆ ಭಾರತ ಸರ್ಕಾರ, ಹಲವಾರು ಸಂಘ ಸಂಸ್ಥೆಗಳು ಅಷ್ಟೇ ಏಕೆ ಆಸ್ಟ್ರೇಲಿಯಾ ಹಾಗೂ ಉರುಗ್ವೆ ದೇಶಗಳೂ ಸಹ ಸನ್ಮಾನಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...