alex Certify
ಕನ್ನಡ ದುನಿಯಾ       Mobile App
       

Kannada Duniya

ಮತ ಹಾಕದ ಮಹಿಳೆ ಪತಿಗೆ ಇಂಥ ಶಿಕ್ಷೆ

odis-pti

ಅಂಗೂಲ್: ಮತ ಹಾಕದ ಮಹಿಳೆಯ ಪತಿಗೆ ಸ್ಥಳೀಯ ಪುಡಾರಿಗಳು ಅಮಾನವೀಯ ಶಿಕ್ಷೆ ನೀಡಿದ ಪ್ರಕರಣ ಒಡಿಶಾದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬನಿಗೆ ಹಳ್ಳಿಗಳಿಗೆ ತಿರುಗಿ ಜಾಗಟೆ ಬಾರಿಸಿಕೊಂಡು ಅಳುತ್ತಾ ಕ್ಷಮಿಸಿ ಎಂದು ಕೇಳುವ ಶಿಕ್ಷೆ ನೀಡಲಾಗಿದೆ. ಬಡಕೆರಾ ಸಮೀಪದ ರಗುಡಿಪಾಡ ಗ್ರಾಮದ ದುಶ್ಯಂತ್ ಸಾಹು ಶಿಕ್ಷೆಗೆ ಒಳಗಾದವ.

ಈತನ ಪತ್ನಿ ಮಲ್ಲಿಕಾ ಸಾಹು ಸ್ಥಳೀಯ ಪಂಚಾಯಿತಿ ಸದಸ್ಯೆಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸರಪಂಚ ಅಭ್ಯರ್ಥಿಗೆ ಬೆಂಬಲಿಸಿ ಮತ ಹಾಕಿರಲಿಲ್ಲ.

ಇದರಿಂದ ಆಕ್ರೋಶಗೊಂಡ ಪಂಚಾಯಿತಿ ಮುಖಂಡರು, ದುಶ್ಯಂತ್ ಸಾಹುಗೆ 13 ಹಳ್ಳಿಗಳಿಗೆ ತಿರುಗಿ ಜಾಗಟೆ ಬಾರಿಸುತ್ತಾ ಕ್ಷಮೆ ಕೇಳುವ ಶಿಕ್ಷೆ ನೀಡಿದ್ದಾರೆ.

ಹಳ್ಳಿಯ ಜನ ಈತನನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಾಗಟೆ ಬಾರಿಸುತ್ತಿದ್ದ ಸಾಹುನನ್ನು ರಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...