alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿ ನೋಡಲು ಈತ ಮಾಡಿದ್ದೇನು ಅಂತ ಕೇಳಿದ್ರೇ….

Man enters airport using forged ticket to see girlfriend off on I-Day eve, heldಇಟಲಿ ಪ್ರಜೆಯೊಬ್ಬ ದೆಹಲಿ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದ ತನ್ನ ಗೆಳತಿಯನ್ನು ನೋಡಲು ಹುಚ್ಚು ಸಾಹಸ ಮಾಡಿದ್ದಾನೆ. ಈತನನ್ನು ಈಗ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆಗಸ್ಟ್ 15 ರಂದು ನವದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಅದರಂತೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಕಟ್ಟೆಚ್ಚರ ವಹಿಸಲಾಗಿತ್ತು. ಅದಾಗ್ಯೂ ವಾಮಮಾರ್ಗದಲ್ಲಿ ಒಳ ಪ್ರವೇಶಿಸಲು ಸಫಲನಾಗಿದ್ದ ಈತ, ಒಳಗಿದ್ದ ವೇಳೆ ಅನುಮಾನಾಸ್ಪದ ನಡವಳಿಕೆ ತೋರಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿಯತ್ತು ಬಯಲಾಗಿದೆ.

ಈತನ ಗೆಳತಿ ಆಗಸ್ಟ್ 15 ರಂದು ಬೆಳಗಿನ ಜಾವ 2-55 ಕ್ಕೆ ಚೀನಾ ಈಸ್ಟರ್ನ್ ಏರ್ಲೈನ್ಸ್ ನಲ್ಲಿ ಪ್ರಯಾಣ ಮಾಡಬೇಕಿತ್ತು. ಈತನ ಪ್ರಯಾಣದ ಟಿಕೇಟ್ ಆಗಸ್ಟ್ 16 ಕ್ಕೆ ಕಾಯ್ದಿರಿಸಲಾಗಿತ್ತು. ಆದರೆ ಗೆಳತಿಯನ್ನು ಕಾಣಬೇಕೆಂಬ ಹಂಬಲದಿಂದ ಈತ, ಫೋಟೋ ಎಡಿಟ್ ಸೌಲಭ್ಯ ಬಳಸಿ ತನ್ನ ಟಿಕೇಟ್ ನಲ್ಲಿ ಆಗಸ್ಟ್ 15 ಎಂದು ನಮೂದಿಸುವ ಮೂಲಕ ವಿಮಾನ ನಿಲ್ದಾಣದೊಳಕ್ಕೆ ಪ್ರವೇಶ ಪಡೆದಿದ್ದ. ಬಳಿಕ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...