alex Certify
ಕನ್ನಡ ದುನಿಯಾ       Mobile App
       

Kannada Duniya

ಇವನಿಗೆ ಉರಿಯೋದೇ ಇಲ್ವ..?

chili

ಭೋಪಾಲ್: ಊಟ ಮಾಡುವ ಸಂದರ್ಭದಲ್ಲಿ ಸ್ವಲ್ಲ ಕಾರವಾಗಿದ್ದರೂ ಉರಿ, ಉರಿಯಾಗುತ್ತೆ. ಇನ್ನು ಜಾಸ್ತಿ ಕಾರ ಇದ್ದರಂತೂ ತಿನ್ನುವುದನ್ನೇ ನಿಲ್ಲಿಸುತ್ತೇವೆ.

ಆದರೆ, ಇಲ್ಲೊಬ್ಬ ಭೂಪ ಪ್ರತಿದಿನ 3 ಕೆ.ಜಿ. ಮೆಣಸಿನ ಕಾಯಿ ತಿಂದು ಅರಗಿಸಿಕೊಳ್ಳುತ್ತಾನೆ ಎಂದರೆ ನೀವು ನಂಬಲೇಬೇಕು. ಮಧ್ಯಪ್ರದೇಶದ ಹಳ್ಳಿಯೊಂದರ ನಿವಾಸಿ ಪ್ಯಾರೆ ಮೋಹನ್ ಆರೋಗ್ಯ ಕಾಪಾಡಿಕೊಂಡು ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಮೆಣಸಿನ ಕಾಯಿ ತಿನ್ನುವುದನ್ನು ರೂಢಿಸಿಕೊಂಡಿದ್ದಾರೆ.

49 ವರ್ಷದ ಪ್ಯಾರೆ ಮೋಹನ್ ಹಸಿ ಮೆಣಸಿನ ಕಾಯಿ, ಒಣಮೆಣಸಿಕಾಯಿ, ಕಾರದಪುಡಿಯನ್ನು ಎದುರಲ್ಲಿಟ್ಟುಕೊಂಡು ಮೃಷ್ಟಾನ್ನವನ್ನು ಸವಿದಂತೆ ತಿನ್ನುತ್ತಾನೆ.

ಈತ ತಿನ್ನುವುದನ್ನು ನೋಡಿದವರಿಗಂತೂ ಬರಬಾರದ ಜಾಗದಲ್ಲೆಲ್ಲಾ ನೀರು ಬರುತ್ತೆ. ಆದರೆ, ಆತನಿಗೆ ಮಾತ್ರ ಏನೂ ಆಗಿಲ್ಲ ಎನ್ನುವುದೇ ಸೋಜಿಗದ ವಿಷಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...