alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲೀಕನ ಕಾರು ಕದ್ದೊಯ್ದು ಟ್ಯಾಕ್ಸಿ ಮಾಡಿಕೊಂಡಿದ್ದ ಭೂಪ

representational image 235ಪಂಚತಾರಾ ಹೋಟೆಲ್ ಒಂದರ ಜಿಮ್ ತರಬೇತುದಾರರಾಗಿದ್ದವರ ಕಾರು ಚಾಲಕನೊಬ್ಬ ಅವರ ಐಷಾರಾಮಿ ಕಾರನ್ನು ಕದ್ದೊಯ್ದು ಟ್ಯಾಕ್ಸಿ ಮಾಡಿಕೊಂಡಿದ್ದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಕಳೆದ ಆರು ತಿಂಗಳಿನಿಂದ ಸಂದೀಪ್ ಗೋಮ್ಸ್ ಎಂಬವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಹೇಶ್ ಎಂಬಾತ, ಜೂನ್ 11 ರಂದು ಹೇಳದೆ ಕೇಳದೆ ಅವರ ಕಾರು ತೆಗೆದುಕೊಂಡು ಹೋಗಿದ್ದ.

ಸಂದೀಪ್ ಆತನನ್ನು ಸಂಪರ್ಕಿಸಲು ಯತ್ನಿಸಿದರೂ ಮೊಬೈಲ್ ಸ್ವಿಚಾಫ್ ಮಾಡಿಕೊಂಡಿದ್ದ ಕಾರಣ ಸಾಧ್ಯವಾಗಿರಲಿಲ್ಲ. ಕೊನೆಗೆ ಸಂದೀಪ್, ಪೊಲೀಸರಿಗೆ ದೂರು ನೀಡಿದ್ದರು. ಮಹೇಶನ ಮೊಬೈಲ್ ಐಎಂಇಐ ಸಂಖ್ಯೆ ಆಧಾರದ ಮೇಲೆ ಆತ ಅಲಹಾಬಾದ್ ನಲ್ಲಿರುವುದನ್ನು ಅರಿತ ಪೊಲೀಸರು ಇದೀಗ ಆತನನ್ನು ಬಂಧಿಸಿ 30 ಲಕ್ಷ ರೂ. ಮೌಲ್ಯದ ಫಾರ್ಚೂನರ್ ಕಾರನ್ನು ವಶಕ್ಕೆ ಪಡೆದಿದ್ದಾರೆ.

ತನ್ನ ನಾದಿನಿಯ ಮದುವೆಗೆ ಹಣ ಹೊಂದಿಸಲು ಕಾರು ಕದ್ದಿದ್ದಾಗಿ ಒಪ್ಪಿಕೊಂಡಿರುವ ಮಹೇಶ್, ಮಾರಾಟ ಮಾಡಲು ಸಾಧ್ಯವಾಗದ ಕಾರಣ ಅದನ್ನೇ ಟ್ಯಾಕ್ಸಿಯನ್ನಾಗಿ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದುದ್ದಾಗಿ ತಿಳಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...