alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಯ ಮೇಲೆ ರಾಷ್ಟ್ರಧ್ವಜ: ಮಾಲೀಕನ ವಿರುದ್ದ ಕೇಸ್

dog

ನಾಯಿಯ ಮೈ ಮೇಲೆ ರಾಷ್ಟ್ರಧ್ವಜವನ್ನು ಹೊದಿಸಿ ಗಣರಾಜ್ಯೋತ್ಸವದಂದು ರಸ್ತೆಯಲ್ಲಿ ಪರೇಡ್ ನಡೆಸಿದ ವ್ಯಕ್ತಿಯೊಬ್ಬ ಇದೀಗ ಪೊಲೀಸ್ ಠಾಣೆಗೆ ಪರೇಡ್ ನಡೆಸುವಂತಾಗಿದೆ.

ಹೌದು. ಗುಜರಾತ್ ನ ಸೂರತ್ ನಲ್ಲಿ ಜನವರಿ 26 ರ ಮುಂಜಾನೆ ನಾಯಿಗಳ ಓಟವನ್ನು ಆಯೋಜಿಸಲಾಗಿತ್ತು. ಓಟದಲ್ಲಿ 150 ನಾಯಿಗಳು ವಿವಿಧ ತೊಡುಗೆಗಳನ್ನು ತೊಟ್ಟು ಭಾಗವಹಿಸಿದ್ದವು. ಈ ಸಮಯದಲ್ಲಿ ಪಿಪ್‌ ಲೋಡ್‌ ಪ್ರದೇಶದ ನಿವಾಸಿ ಭರತ್‌ ಗೋಹಿಲ್‌ ತನ್ನ ನಾಯಿಯ ಮೈಮೇಲೆ ಅಶೋಕಚಕ್ರ ಇರುವ ರಾಷ್ಟ್ರ ಧ್ವಜವನ್ನು ಹೊದಿಸಿ ನಾಯಿಯನ್ನು ಓಡಿಸಿದ್ದ.

ಆದರೆ ರಾಷ್ಟ್ರಧ್ವಜ ಉಡುಗೆ ತೊಡಿಸಿದ್ದ ಗೋಹಿಲ್‌ ಕ್ರಮಕ್ಕೆ ಆಕ್ಷೇಪಿಸಿ, ಈ ರೀತಿ ತೊಡಿಸುವುದು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದಂತೆ ಎಂದು ಸಂಘಟಕರು ಅವರ ನಾಯಿಗೆ ಅವಕಾಶ ನೀಡಲಿಲ್ಲ. ಆದರೆ ಗೋಹಿಲ್‌ ಮಾತ್ರ, ನಾಯಿ ನಮ್ಮ ಕುಟುಂಬದ ಸದಸ್ಯ. ಆತನಿಗೆ ರಾಷ್ಟ್ರಧ್ವಜ ಉಡುಗೆ ತೊಡಿಸಿದ್ದರಲ್ಲಿ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಈ ಕುರಿತಾಗಿ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದು ಮಾತ್ರವಲ್ಲ, ಘಟನೆಗೆ ಸಂಬಂಧಿಸಿ ನಾಗರಿಕರೊಬ್ಬರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಗೋಹಿಲ್‌ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...