alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಿವಳಿ ತಲಾಖ್ ನೀಡಿ ಮತ್ತೊಂದು ಮದುವೆಯಾದ ಪತಿ…!

ಕಣ್ಣೂರು: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಜಾರಿಗೊಳಿಸಲು ಒಪ್ಪಿಗೆ ಪಡೆದು, ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯಲು ಕಾಯುತ್ತಿರುವಾಗಲೇ ಕೇರಳ ಕಣ್ಣೂರಿನಲ್ಲಿ ತ್ರಿವಳಿ ತಲಾಖ್ ಪ್ರಕರಣ ನಡೆದಿವೆ.

23 ರ ಹರೆಯದ ಮಹಿಳೆ ಇಲ್ಲಿನ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ, ತನ್ನ ಪತಿ ತ್ರಿವಳಿ ತಲಾಖ್ ಹೇಳಿದ್ದಾಗಿ ನ್ಯಾಯ ಕೋರಿದ್ದಾರೆ. ಪಯ್ಯನೂರು ಸಮೀಪದ ಪೆರುಂಬಾ ಪಟ್ಟಣದ ವ್ಯಕ್ತಿಯನ್ನು ಈಕೆ ಮದುವೆಯಾಗಿದ್ದು, ನಾಲ್ಕು ವರ್ಷದ ಮಗುವಿದೆ.

ಅವರು ಜುಲೈ 13ರಂದು ಬಿಳಿ ಕಾಗದದಲ್ಲಿ ತ್ರಿವಳಿ ತಲಾಖ್ ಎಂದು ಬರೆದು ನನಗೆ ಕಳಿಸಿದ್ದಾರೆ. ಬಳಿಕ ಒಂಬತ್ತು ದಿನದಲ್ಲಿ ಮತ್ತೊಂದು ಮದುವೆಯಾಗಿದ್ದಾರೆಂದು ದೂರುದಾರರು ಟಿವಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಮದುವೆ ಸಂದರ್ಭದಲ್ಲಿ ಪತಿ, ತವರಿನಿಂದ 40 ಸವರನ್ ಚಿನ್ನ ಹಾಗೂ 15 ಸೆಂಟ್ ಜಾಗ ಪಡೆದುಕೊಂಡಿದ್ದಾರೆ. ಅದನ್ನು ಹಿಂದಿರುಗಿಸಿಲ್ಲ ಎಂದು ಆಕೆ ಆರೋಪಿಸಿದ್ದಾರೆ. ಪಯ್ಯನೂರು ಪೊಲೀಸರು ನ್ಯಾಯಾಲಯದ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ.

ಈ ಮಧ್ಯೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ. ಜೋಸ್ಫಿನ್ ಪ್ರತಿಕ್ರಿಯೆ ನೀಡಿ, ಈ ಪ್ರಕರಣವನ್ನು ದಾಖಲಿಸಿಕೊಳ್ಳುತ್ತೇವೆ. ತ್ರಿವಳಿ ತಲಾಖನ್ನು ಸುಪ್ರಿಂ ಕೋರ್ಟ್ ನಿಷೇಧಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...