alex Certify
ಕನ್ನಡ ದುನಿಯಾ       Mobile App
       

Kannada Duniya

ಹಾರರ್ ಮೂವಿ ನೋಡುತ್ತಲೇ ಪ್ರಾಣ ಬಿಟ್ಟ ಪ್ರೇಕ್ಷಕ

man-dies-watching-horror-comedy-movie-intlo-deyyam-nakem-bhayam28 ವರ್ಷದ ವ್ಯಕ್ತಿಯೊಬ್ಬ ಹಾರರ್ ಸಿನಿಮಾ ನೋಡುತ್ತಿರುವಾಗಲೇ ಚಿತ್ರಮಂದಿರದಲ್ಲಿ ಪ್ರಾಣ ಬಿಟ್ಟ ಘಟನೆ ಹೈದರಾಬಾದಿನ ಸಿದ್ದಿಪೇಟ್ ನಲ್ಲಿ ನಡೆದಿದೆ.

ಶೇಕ್ ಶಾದೂಲ್ ಎಂಬ ಕೂಲಿ ಕಾರ್ಮಿಕ, ಅಲ್ಲರಿ ನರೇಶ್ ಅಭಿನಯದ ‘ಇಂಟ್ಲು ದೆಯ್ಯಂ ನಾಕೇಮಿ ಭಯಂ’ ಎಂಬ ಚಿತ್ರವನ್ನು ವೀಕ್ಷಿಸಲು ಮ್ಯಾಟನಿ ಶೋ ಗೆ ತೆರಳಿದ್ದ.

ಚಿತ್ರದ ಅರ್ಧ ವಿರಾಮದ ವೇಳೆ ಆತನ ಪಕ್ಕದಲ್ಲಿದ್ದ ಪ್ರೇಕ್ಷಕನಿಗೆ ಶೇಕ್ ನಿಶ್ಚಲವಾಗಿ ಮಲಗಿರುವುದು ಕಂಡು ಬಂದಿದೆ. ಅಲ್ಲದೇ ಆತ ಮೂತ್ರ ವಿಸರ್ಜನೆ ಮಾಡಿಕೊಂಡಿರುವುದನ್ನು ಗಮನಿಸಿದ ಆತ, ಚಿತ್ರಮಂದಿರದ ಸಿಬ್ಬಂದಿಗೆ ವಿಷಯ ತಿಳಿಸಿದ ವೇಳೆ ಶೇಕ್ ಮೃತಪಟ್ಟಿರುವುದು ಖಚಿತಪಟ್ಟಿದೆ.

ಚಿತ್ರಮಂದಿರದ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ ಶೇಕ್ ಮೃತಪಟ್ಟ ವಿಷಯ ತಿಳಿದು ಅಲ್ಲಿಗೆ ಬಂದ ಆತನ ಸಂಬಂಧಿಕರು ಪರಿಹಾರ ನೀಡುವಂತೆ ಕೋರಿ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಚಿತ್ರದ ನಿರ್ಮಾಪಕರಲ್ಲಿ ಮಾತನಾಡುವುದಾಗಿ ಚಿತ್ರಮಂದಿರದವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...