alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಒಳ ಉಡುಪು ಕದಿಯುವಾಗಲೇ ಸಿಕ್ಕಿಬಿದ್ದ ಚಾಲಕ

ಅಪಾರ್ಟ್ಮೆಂಟ್ ನಿವಾಸಿಯೊಬ್ಬರನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಬಂದಿದ್ದ ಕ್ಯಾಬ್ ಚಾಲಕನೊಬ್ಬ ಈ ಸಂದರ್ಭದಲ್ಲಿ ಮನೆಗಳ ಹೊರಗೆ ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಕಳವು ಮಾಡಲು ಯತ್ನಿಸಿದ್ದು, ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.

ಇಂತದೊಂದು ವಿಲಕ್ಷಣ ಘಟನೆ ನೋಯ್ಡಾದ ಸೆಕ್ಟರ್ 93 ರಲ್ಲಿ ನಡೆದಿದ್ದು, ಅಶೋಕ್ ಕುಮಾರ್ ಎಂಬ 25 ವರ್ಷದ ಕ್ಯಾಬ್ ಚಾಲಕ ಅಲ್ಲಿನ ಎಕ್ಸ್ ಪ್ರೆಸ್ ವ್ಯೂ ಅಪಾರ್ಟ್ಮೆಂಟ್ ನಿವಾಸಿಯೊಬ್ಬರನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಶನಿವಾರ ರಾತ್ರಿ 12-30 ರ ಸುಮಾರಿಗೆ ಆಗಮಿಸಿದ್ದ.

ವಿಮಾನ ನಿಲ್ದಾಣಕ್ಕೆ ಹೊರಡಲು ಇನ್ನೂ ತಡವಿದ್ದ ಕಾರಣ ತನ್ನ ಕ್ಯಾಬ್ ನಿಲ್ಲಿಸಿಕೊಂಡಿದ್ದ ಅಶೋಕ್ ಕುಮಾರ್ ಅಪಾರ್ಟ್ಮೆಂಟ್ ನ ಮನೆಗಳ ಮುಂದೆ ಒಣಗಲು ಹಾಕಿದ್ದ ಉಡುಪುಗಳನ್ನು ಕದ್ದಿದ್ದಾನೆ. ಇದು ವಾಚ್ಮನ್ ಗಮನಕ್ಕೆ ಬಂದಿದ್ದು, ಆತ ಬೆನ್ನಟ್ಟಿದರೂ ತಪ್ಪಿಸಿಕೊಂಡಿದ್ದಾನೆ. ಇತರೆ ನಿವಾಸಿಗಳೂ ಸ್ಥಳಕ್ಕಾಗಮಿಸಿದ್ದು, ಬಳಿಕ ಕ್ಯಾಬ್ ಬಳಿ ನಿಂತಿದ್ದ ಅಶೋಕ್ ಕುಮಾರ್ ಬಳಿಗೆ ಹೋಗಿದ್ದಾರೆ. ಈತನೇ ತಪ್ಪಿಸಿಕೊಂಡು ಹೋದ ವ್ಯಕ್ತಿ ಎಂದು ವಾಚ್ಮನ್ ಮಾಹಿತಿ ನೀಡಿದ ಮೇರೆಗೆ ಕ್ಯಾಬ್ ಪರಿಶೀಲಿಸಿದಾಗ ಮಹಿಳೆಯರ ಒಳ ಉಡುಪುಗಳು ಪತ್ತೆಯಾಗಿವೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆತ ಮೂಲತಃ ಜಹಾಂಗೀರ್ಪುರ್ ನವನೆಂದು ತಿಳಿದುಬಂದಿದ್ದು, ಮದ್ಯ ಸೇವಿಸಿರುವ ಸಂಗತಿಯೂ ಬಯಲಾಗಿದೆ. ಆತನ ಮಾನಸಿಕ ಸ್ಥಿತಿ ಪರಿಶೀಲಿಸಲು ಪೊಲೀಸರು ಮುಂದಾಗಿದ್ದು, ಆತನ ವಿರುದ್ದ ಯಾರೂ ದೂರು ನೀಡಲು ಮುಂದೆ ಬಾರದ ಕಾರಣ ಪ್ರಕರಣ ದಾಖಲಿಸಿಲ್ಲವೆಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...