alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಸುಂದರ ಮುಖಕ್ಕೆ ಹೆದರಿ ಹೀಗೆ ಮಾಡ್ದ ಪತಿ…!

ಮುಂಬೈನಲ್ಲಿ ದಂಗಾಗಿಸುವ ಘಟನೆಯೊಂದು ನಡೆದಿದೆ. ಪತ್ನಿ ಸೌಂದರ್ಯ, ಪತಿಯ ಭಯಕ್ಕೆ ಕಾರಣವಾಗಿದೆ. ಅಪರಾಧಿ ಪಟ್ಟಿಯಲ್ಲಿರುವ ವ್ಯಕ್ತಿ ಪತ್ನಿ ಮೇಲೆ ಪರಪುರುಷರ ಕಣ್ಣು ಬೀಳಬಾರದೆಂದು ಮುಖಕ್ಕೆ ಗಾಯ ಮಾಡಿದ್ದಾನೆ. ಆರೋಪಿ ರಾಜ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ಬಾಲಿವುಡ್ ನಲ್ಲಿ ಚಾಲಕನಾಗಿ ರಾಜ್ ಕೆಲಸ ಮಾಡ್ತಿದ್ದಾನೆ. ಕ್ಯಾಮರಾ ಹೊತ್ತೊಯ್ಯುವ ವಾಹನ ಚಾಲಕನಾಗಿರುವ ರಾಜ್, ಸೆಟ್ ಸಿದ್ಧಪಡಿಸುವ ಕೆಲಸ ಮಾಡ್ತಾನೆ. ಆತನ ಪತ್ನಿ ಹಾಗೂ ಮಕ್ಕಳು ಮಧ್ಯಪ್ರದೇಶದ ಜಬಲ್ಪುರದಲ್ಲಿ ವಾಸವಾಗಿದ್ದಾರೆ. ಇಬ್ಬರು ಮಕ್ಕಳ ತಾಯಿ ವೃತ್ತಿಯಲ್ಲಿ ಶಿಕ್ಷಕಿ. ತಾನು ಮನೆಯಲ್ಲಿರದ ವೇಳೆ ಸುಂದರ ಪತ್ನಿ ಮೇಲೆ ಬೇರೆಯವರ ಕಣ್ಣು ಬೀಳದಿರಲಿ ಎನ್ನುವ ಕಾರಣಕ್ಕೆ ಸೊಳ್ಳೆ ಕಾಯಿಲ್ ಹಚ್ಚುವ ಸ್ಟ್ಯಾಂಡನ್ನು ಪತ್ನಿ ಮುಖಕ್ಕೆ ತಿಕ್ಕಿದ್ದಾನೆ. ಪತ್ನಿ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ನೀಡಿದ್ದಾಳೆ.

ರಾಜ್ ವಿರುದ್ಧ ಎರಡು ದಿನಗಳ ಹಿಂದಷ್ಟೇ ಅತ್ಯಾಚಾರ ಯತ್ನ ಪ್ರಕರಣ ಕೂಡ ದಾಖಲಾಗಿದೆ. ಮುಂಬೈನಲ್ಲಿ 9 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಈಗ ಪತ್ನಿ ಮೇಲೆ ಹಲ್ಲೆ ಪ್ರಕರಣವೂ ದಾಖಲಾಗಿದ್ದು, ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...