alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಮೇಲಿನ ಸಿಟ್ಟಿಗೆ ದೇವರ ವಿಗ್ರಹ ಒಡೆದ ಭೂಪ

Hanuman Statute

ಇಂದೋರ್: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಹಳೆದಾಯ್ತು. ಈಗೇನಿದ್ದರೂ, ಪತಿ, ಪತ್ನಿ ನಡುವೆ ನಿರಂತರವಾಗಿ ಜಗಳ ನಡೆಯುತ್ತಿರುತ್ತವೆ. ಈ ಪ್ರಕರಣದಲ್ಲಿ ಗಂಡನ ಜೊತೆಗೆ ಜಗಳ ಮಾಡಿಕೊಂಡ ಪತ್ನಿ ತವರಿಗೆ ಹೋಗಿದ್ದಾಳೆ.

ಇದರಿಂದ ಸಿಟ್ಟಾದ ಮಹಾಶಯನೊಬ್ಬ, ದೇವರ ವಿಗ್ರಹಕ್ಕೇ ಹಾನಿ ಮಾಡಿದ ಘಟನೆ ಮಧ್ಯಪ್ರದೇಶದ ಖೇಡಪಾಟಿ ಹನುಮಾನ್ ದೇವಾಲಯದಲ್ಲಿ ನಡೆದಿದೆ. ಗಂಡನ ಜೊತೆ ಮುನಿಸಿಕೊಂಡು ಹೆಂಡತಿ ತವರಿಗೆ ಹೋಗಿದ್ದಾಳೆ. ಆಕೆ ವಾಪಸ್ ಬಾರದ ಕಾರಣ, ವಿಚಲಿತನಾದ ಗಂಡ ಆಂಜನೇಯನ ವಿಗ್ರಹವನ್ನು ಹಾನಿಗೊಳಿಸಿದ್ದಾನೆ. ಪಲ್ಡಾದ 37 ವರ್ಷದ ಮನೋಜ್ ಬಂಜಾರ ಎಂಬಾತನೇ ಆಂಜನೇಯನ ವಿಗ್ರಹಕ್ಕೆ ಹಾನಿ ಮಾಡಿದ ಮಹಾನುಭಾವ. ಕಳೆದ 4 ತಿಂಗಳಿನಿಂದ ಈತನ ಪತ್ನಿ ತವರಿನಲ್ಲಿಯೇ ವಾಸವಾಗಿದ್ದಾಳೆ.

ಆಕೆಯನ್ನು ಕರೆತರಲು ಮನೋಜ್ ಏನೆಲ್ಲಾ ಪ್ರಯತ್ನ ನಡೆಸಿದರೂ, ಫಲಿಸಿಲ್ಲ. ಕೊನೆಗೆ ಆಕ್ರೋಶದಿಂದ ಊರಿನಲ್ಲೇ ಇರುವ ಆಂಜನೇಯನ ದೇವಾಲಯಕ್ಕೆ ಹೋಗಿ ದೇವರ ವಿಗ್ರಹವನ್ನು ಹಾನಿಗೊಳಿಸಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಬಿಗುವಿನ ವಾತಾವರಣ ಉಂಟಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...