alex Certify
ಕನ್ನಡ ದುನಿಯಾ       Mobile App
       

Kannada Duniya

24 ದಿನ 600 ಕಿ.ಮೀ ಸೈಕಲ್ ನಲ್ಲಿ ಸುತ್ತಿದ ನಂತ್ರ ಸಿಕ್ಲು ಪತ್ನಿ…!

ಜಾರ್ಖಂಡ್ ನಲ್ಲಿ ಪತಿಯೊಬ್ಬ ಸಾಹಸ ಮಾಡಿದ್ದಾನೆ. ನಾಪತ್ತೆಯಾಗಿದ್ದ ಪತ್ನಿಯನ್ನು 24 ದಿನಗಳ ನಂತ್ರ ಪತ್ತೆ ಹಚ್ಚಿದ್ದಾನೆ. ಸುಮಾರು 600 ಕಿಲೋಮೀಟರ್ ಸೈಕಲ್ ನಲ್ಲಿ ಸುತ್ತಾಡಿದ ಪತಿಗೆ ಕೊನೆಗೂ ಪತ್ನಿ ಸಿಕ್ಕಿದ್ದಾಳೆ.

ಘಟನೆ ನಡೆದಿರುವುದು ಬಾಲಿಗೊಡಾ ಗ್ರಾಮದಲ್ಲಿ. ಮನೋಹರ್ ನಾಯಕ್ ಕಥೆಯಿದು. ಈತನ ಪತ್ನಿ ಜನವರಿ 14ರಂದು ಸಂಕ್ರಾಂತಿಗೆಂದು ತವರಿಗೆ ಹೋಗಿದ್ದಳು. ನಂತ್ರ ಮನೆಗೆ ವಾಪಸ್ ಬರಲಿಲ್ಲ. ಪತ್ನಿ ಕಣ್ಮರೆಯಾಗಿದ್ದಾಳೆಂದು ಮನೋಹರ್ ದೂರು ನೀಡಿದ್ದ. ಆದ್ರೆ ಪೊಲೀಸರು ಯಾವುದೇ ಕ್ರಮಕೈಗೊಂಡಿರಲಿಲ್ಲ.

ಪತ್ನಿ ಹುಡುಕುವ ದೃಢ ನಿರ್ಧಾರ ಕೈಗೊಂಡ ಮನೋಹರ್ ಹಳೆ ಸೈಕಲ್ ರಿಪೇರಿ ಮಾಡಿ ಸೈಕಲ್ ಏರಿದ್ದಾನೆ. ಪತ್ನಿ ಪತ್ತೆಗೆ ಎಷ್ಟು ದಿನವಾಗುತ್ತೆ ಎಂಬ ಅಂದಾಜು ಆತನಿಗೂ ಇರಲಿಲ್ಲ. 24 ದಿನಗಳ ಕಾಲ ಊರೂರು ಸುತ್ತಿದ್ದಾನೆ. ನಂತ್ರ ಸ್ಥಳೀಯ ಪತ್ರಿಕೆ ಸಹಾಯ ಪಡೆದು ಪತ್ನಿ ಫೋಟೋವನ್ನು ಪೇಪರ್ ನಲ್ಲಿ ಹಾಕಿಸಿದ್ದಾನೆ.

ಕೊಲ್ಕತ್ತಾದ ಖಡಗ್ಪುರದಲ್ಲಿ ಕೆಲವರು ಮನೋಹರ್ ಪತ್ನಿ ಗುರುತು ಹಿಡಿದಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೋಹರ್ ಗೆ ಮಾಹಿತಿ ನೀಡಿದ್ದು ಅಲ್ಲಿಗೆ ಹೋದ ಮನೋಹರ್ ಪತ್ನಿಯನ್ನು ಮನೆಗೆ ಕರೆತಂದಿದ್ದಾನೆ. ಫೆಬ್ರವರಿ 11ರಂದು ಮನೋಹರ್ ಪತ್ನಿ ಜೊತೆ ಮನೆಗೆ ಬಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...