alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರಾಯಿ ಗಲಾಟೆಯಲ್ಲಿ ಖಾಸಗಿ ಅಂಗ ಕಟ್…!

ತಮಿಳುನಾಡಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಇಬ್ಬರ ಗಲಾಟೆ ಖಾಸಗಿ ಅಂಗ ಕತ್ತರಿಸುವ ಮಟ್ಟಿಗೆ ತಿರುಗಿದೆ. ಮದ್ಯವನ್ನು ಸಮಪಾಲು ಮಾಡಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಇನ್ನೊಬ್ಬನ ಖಾಸಗಿ ಅಂಗಕ್ಕೆ ಬ್ಲೇಡ್ ಹಾಕಿದ್ದಾನೆ.

ಘಟನೆ ತಿರುವಣ್ಣಾಮಲೈನಲ್ಲಿ ನಡೆದಿದೆ. ಅಲ್ಲಿನ ಸರಾಯಿ ಅಂಗಡಿ ಬಳಿ ಮದ್ಯ ಸೇವನೆ ಮಾಡಿದ ಮೂರ್ತಿ ಹಾಗೂ ಶರವಣ ಗಲಾಟೆ ಶುರು ಮಾಡಿದ್ದಾರೆ. ಶರವಣ, ಮೂರ್ತಿಯನ್ನು ತಳ್ಳಿದ್ದಾನೆ. ಮೂರ್ತಿ ಕೆಳಗೆ ಬಿದ್ದಿದ್ದು, ಗಾಯವಾಗಿದೆ. ಇಷ್ಟಾದ್ರೂ ಮೂರ್ತಿ, ಶರವಣನಿಗೆ ಬೈದಿದ್ದಾನೆ. ಇದ್ರಿಂದ ಮತ್ತಷ್ಟು ಕೋಪಗೊಂಡ ಶರವಣ, ಕಿಸೆಯಲ್ಲಿದ್ದ ಬ್ಲೇಡ್ ತೆಗೆದು ಮೂರ್ತಿ ಖಾಸಗಿ ಅಂಗ ಕತ್ತರಿಸಿದ್ದಾನೆ.

ಮೂರ್ತಿ ಕೂಗಿಕೊಳ್ತಿದ್ದಂತೆ ಅಲ್ಲಿಗೆ ಬಂದ ಸ್ಥಳೀಯರು ಮೂರ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಟ್ಟಾದ ಖಾಸಗಿ ಅಂಗವನ್ನು ಮತ್ತೆ ಜೋಡಿಸಲು ಸಾಧ್ಯವಿಲ್ಲವೆಂದಿರುವ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಶರವಣನನ್ನು ಪೊಲೀಸ್ ಕೈಗೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...