alex Certify
ಕನ್ನಡ ದುನಿಯಾ       Mobile App
       

Kannada Duniya

ಹಳಿ ದಾಟಲು ಹೋಗಿ ಅಪಾಯಕ್ಕೆ ಸಿಲುಕಿದ್ದ ಮೆಟ್ರೋ ಪ್ರಯಾಣಿಕ

ಮೆಟ್ರೋ ಏರಲು ಬಂದಿದ್ದ ಪ್ರಯಾಣಿಕನೊಬ್ಬ ಮತ್ತೊಂದು ಪ್ಲಾಟ್ ಫಾರಂಗೆ ಹೋಗಲು ಹಳಿ ದಾಟುವ ವೇಳೆ ಪ್ರಾಣಾಪಾಯಕ್ಕೆ ಸಿಲುಕಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ನವದೆಹಲಿಯ ಶಾಸ್ತ್ರಿ ನಗರ ಮೆಟ್ರೋ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ಮಯೂರ್ ಪಟೇಲ್ ಎಂಬಾತ ರೈಲು ಬರುವಾಗಲೇ ಹಳಿ ದಾಟಲು ಮುಂದಾಗಿದ್ದಾನೆ.

ಇದನ್ನು ಗಮನಿಸಿದ ಮೆಟ್ರೋ ರೈಲಿನ ಚಾಲಕ ಕೂಡಲೇ ಬ್ರೇಕ್ ಹಾಕಿದ್ದು, ಇದರಿಂದಾಗಿ ಮಯೂರ್ ಪಟೇಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು, ವಿಚಾರಣೆ ನಡೆಸಿದ ವೇಳೆ ತಾನು ಮತ್ತೊಂದು ಪ್ಲಾಟ್ ಫಾರಂಗೆ ಹೋಗಬೇಕಾಗಿದ್ದ ಕಾರಣ ಹಳಿ ದಾಟಲು ಯತ್ನಿಸಿದ್ದಾಗಿ ತಿಳಿಸಿದ್ದಾನೆ. ಈ ಅಪರಾಧಕ್ಕಾಗಿ ದಂಡ ವಿಧಿಸಿದ ಪೊಲೀಸರು ಬಳಿಕ ಬಿಟ್ಟು ಕಳುಹಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...