alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಟವರ್ ಏರಿ ಪ್ರತಿಭಟನೆ

ಆಂಧ್ರ ಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಲೋಕಸಭೆಯಲ್ಲಿ ಪ್ರತಿಭಟನೆ ಜೋರಾಗಿದೆ. ಇತ್ತ ದೆಹಲಿಯ ಮೆಟ್ರೋ ಭವನದ ಬಳಿ ಓರ್ವ ವ್ಯಕ್ತಿ ಟವರ್ ಏರಿ ಪ್ರತಿಭಟನೆ ನಡೆಸಿದ್ದಾನೆ. ಪ್ರತಿಭಟನಾಕಾರ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಭಿತ್ತಿ ಪತ್ರ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ಪ್ರತಿಭಟನಾಕಾರ ಟವರ್ ಮೇಲೆ ಸುಮಾರು ಒಂದೂವರೆ ಗಂಟೆಯಿಂದ ಪ್ರತಿಭಟಿಸಿದ್ದಾನೆ. ವ್ಯಕ್ತಿಯ ಹುಚ್ಚಾಟ ತಿಳಿದು ದೌಡಾಯಿಸಿದ ಪೊಲೀಸರು, ಟವರ್ ಏರಿ ಪ್ರತಿಭಟನೆ ಮಾಡುತ್ತಿದ್ದ ವ್ಯಕ್ತಿಯನ್ನು ಕೆಳಗೆ ಇಳಿಸುವಲ್ಲಿ ಹರಸಾಹಸಪಟ್ಟರು.

ಟಿಡಿಪಿ ಪಕ್ಷ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿತ್ತು. ಅಲ್ಲದೆ ವಿಶ್ವಾಸ ಮತ ಸಾಬೀತು ಮಾಡುವಂತೆ ಒತ್ತಾಯಿಸಿತ್ತು. ಶುಕ್ರವಾರ ಮೋದಿ ಸರ್ಕಾರ ವಿಶ್ವಾಸ ಮತದಲ್ಲಿ ಜಯ ಸಾಧಿಸಿತ್ತು. ಸೋಮವಾರದಿಂದ ಆರಂಭವಾದ ಸದನದಲ್ಲಿ ಟಿಡಿಪಿ ಸಂಸದರು ಹಾಜರಾಗದೆ, ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...