alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಕ್ಕೆ ಕಂಟಕವಾಯ್ತು ಇಡ್ಲಿ ತಿನ್ನುವ ಸ್ಪರ್ಧೆ…!

ತಿನ್ನೋದು ಅಂದ್ರೆ ಎಲ್ಲರಿಗೂ ಇಷ್ಟ. ವೆರೈಟಿ ವೆರೈಟಿ ತಿನಿಸುಗಳನ್ನು ಕಂಡ್ರೆ ಬಾಯಲ್ಲಿ ನೀರೂರುತ್ತದೆ. ಆದ್ರೆ ತಮಿಳುನಾಡಿನಲ್ಲಿ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವನೊಬ್ಬ ಪ್ರಾಣಕ್ಕೇ ಸಂಚಕಾರ ತಂದುಕೊಂಡಿದ್ದಾನೆ.

ಪಂಡಿಕುಡಿ ಗ್ರಾಮದಲ್ಲಿ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಎಸ್. ಚಿನ್ನತಂಬಿ ಎಂಬಾತ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಗೆಲ್ಲಬೇಕು ಅನ್ನೋ ಛಲದಿಂದ ಗಬಗಬನೆ 12 ಇಡ್ಲಿಗಳನ್ನು ತಿಂದಿದ್ದಾನೆ. 3 ನಿಮಿಷಗಳೊಳಗೆ ನೀರು ಕುಡಿಯದೇ ಯಾರು ಹೆಚ್ಚು ಇಡ್ಲಿ ತಿನ್ನುತ್ತಾರೋ ಅವರಿಗೆ ಗೆಲುವು ಅನ್ನೋ ನಿಯಮವಿತ್ತು. ಚಿನ್ನತಂಬಿ ಸ್ವತಃ ಬಾಣಸಿಗನಾಗಿರೋದ್ರಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ.

ಜನರು ಕೂಡ ಚಪ್ಪಾಳೆ, ಶಿಳ್ಳೆಗಳ ಮೂಲಕ ಚಿನ್ನತಂಬಿಯನ್ನು ಪ್ರೋತ್ಸಾಹಿಸುತ್ತಿದ್ರು. ಆದ್ರೆ 12ನೇ ಇಡ್ಲಿ ತಿಂದು ಮುಗಿಸುತ್ತಿದ್ದಂತೆ ಚಿನ್ನತಂಬಿ ಕುಸಿದು ಬಿದ್ದ. ಎಲ್ಲರೂ ಗಾಬರಿಯಾದ್ರು. ಕೂಡಲೇ ಸ್ಥಳಕ್ಕೆ ಆಂಬ್ಯುಲೆನ್ಸ್ ಕರೆಸಲಾಯ್ತು. ಆದ್ರೆ ಅಷ್ಟರಲ್ಲಿ ಚಿನ್ನತಂಬಿ ಕೊನೆಯುಸಿರೆಳೆದಿದ್ದ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...