alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದನ ಪಡೆದ ಖುಷಿಯಲ್ಲಿ ಹೀಗೂ ಮಾಡ್ತಾರೆ..!

divorce

ಭಾರತದಲ್ಲಿ ಮದುವೆ ಅಂದ್ರೆ ಒಂಥರಾ ಸಂಭ್ರಮ. ಎರಡು ಹೃದಯ ಮತ್ತು ಮನಸ್ಸುಗಳ ಮಿಲನ ಅದು. ನೆಂಟರಿಷ್ಟರೆಲ್ಲ ಒಟ್ಟಿಗೆ ಸೇರಿ ವಿವಾಹ ಮಹೋತ್ಸವವನ್ನು ವಿಶೇಷವಾಗಿ ಆಚರಿಸ್ತಾರೆ. ಆದ್ರೆ ಗುಜರಾತ್ ನಲ್ಲೊಬ್ಬ ಭೂಪ ವಿಚ್ಛೇದನವನ್ನೂ ಸೆಲೆಬ್ರೇಟ್ ಮಾಡಿದ್ದಾನೆ.

ರಾಜ್ಕೋಟ್ ನಿವಾಸಿ ರಿಂಕೇಶ್ ಎಂಬಾತ ತನ್ನ ದಾಂಪತ್ಯ ಮುರಿದು ಬಿದ್ದ ಖುಷಿಯಲ್ಲಿ 50 ಕೆಜಿ ಕಾಜು ಬರ್ಫಿಯನ್ನು ಜನರಿಗೆ ಹಂಚಿ ಸಂಭ್ರಮಿಸಿದ್ದಾನೆ. ಬರ್ಫಿ ಪ್ಯಾಕೆಟ್ ಗಳ ಮೇಲೆಲ್ಲಾ ವಿಚ್ಛೇದನ ಸಂಭ್ರಮಾಚರಣೆ ಅಂತಾ ರಿಂಕೇಶ್ ಮುದ್ರಿಸಿದ್ದ. ಜೊತೆಗೆ ತನ್ನ ಕುಟುಂಬದ ಸದಸ್ಯರ ಹೆಸರುಗಳನ್ನೂ ಬರೆಸಿದ್ದ.

ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲೇ ಪತ್ನಿ ಜೊತೆ ರಿಂಕೇಶ್ ಬಾಂಧವ್ಯ ಅಷ್ಟಕ್ಕಷ್ಟೆ ಎಂಬಂತಾಗಿತ್ತು. ದಾಂಪತ್ಯ ಒಂದು ರೀತಿಯ ಹಿಂಸೆ ಎನಿಸಿಬಿಟ್ಟಿತ್ತು. 26ರ ಹರೆಯದ ರಿಂಕೇಶ್ ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದ. ಸತತ 2 ವರ್ಷಗಳ ಕಾನೂನು ಹೋರಾಟದ ಬಳಿಕ ವಿಚ್ಛೇದನ ದೊರೆತಿದೆ.

ಯಾವ ಕಾರಣಕ್ಕೆ ಪತಿ-ಪತ್ನಿ ಬೇರೆಯಾದ್ರು ಅನ್ನೋದನ್ನು ರಿಂಕೇಶ್ ಬಾಯ್ಬಿಟ್ಟಿಲ್ಲ. ಆದ್ರೆ ಡೈವೋರ್ಸ್ ಪಡೆದ ಖುಷಿಯಲ್ಲಿ ಸಿಹಿ ಹಂಚಿದ ರಿಂಕೇಶ್ ಗೆ ಎಷ್ಟೋ ಜನ ಕರೆ ಮಾಡಿ ಶುಭಾಶಯ ಹೇಳಿದ್ದಾರಂತೆ. ಅದರಲ್ಲೂ ಸೊಸೆ ಕಾಟಕ್ಕೆ ಹೈರಾಣಾದ ಅತ್ತೆಯಂದಿರೆಲ್ಲ ಅಳಲು ತೋಡಿಕೊಂಡಿದ್ದಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...