alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಪ್ಯಾಡ್ ನಲ್ಲಿ ಕೆ.ಜಿ.ಗಟ್ಟಲೇ ಡ್ರಗ್ಸ್ ಪತ್ತೆ…!

ಕ್ರಿಕೆಟ್ ಪ್ಯಾಡ್ ನಲ್ಲಿ ಡ್ರಗ್ಸ್ ಸಾಗಾಣಿಕೆ ಮಾಡಲು ಯತ್ನಿಸಿದ ಜಾಂಬಿಯನ್ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಯೋಧರು ಸುಮಾರು 24 ಕೆ.ಜಿ.ಯಷ್ಟು ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

39 ವರ್ಷದ ಆರ್. ಸಿಲ್ಲಾವೆ ಎಂಬ ವ್ಯಕ್ತಿಯ ನಡವಳಿಕೆ ಸಂಶಯಾಸ್ಪದವಾಗಿತ್ತು. ಹಾಗಾಗಿ ಸಿಐಎಸ್ಎಫ್ ಯೋಧರು ಆತನನ್ನ ವಶಕ್ಕೆ ಪಡೆದು ವಿಚಾರಣೆ ಶುರುಮಾಡಿದರು. ಆತನ ಬಳಿ ಇದ್ದ ಬ್ಯಾಗ್ ನಲ್ಲಿ ಕ್ರಿಕೆಟ್ ನಲ್ಲಿ ಬಳಸುವ 46 ಪ್ಯಾಡ್ ಗಳಿದ್ವು. ಇವುಗಳನ್ನ ಪರಿಶೀಲಿಸಿದಾಗ ಪ್ರತಿ ಪ್ಯಾಡ್ ನಲ್ಲಿ 500 ಗ್ರಾಂ ಡ್ರಗ್ಸ್ ಇರುವುದು ಪತ್ತೆಯಾಗಿದೆ.

ಒಟ್ಟು 24 ಕೆ.ಜಿ. ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಸಿಐಎಸ್ಎಫ್ ಯೋಧರು ಕೂಡಲೇ ಆ ವ್ಯಕ್ತಿಯನ್ನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...