alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ ಗೆ ಬೆಂಕಿ ಹತ್ತಿದ ಪರಿಣಾಮ ಚಾಲಕ ಸಜೀವ ದಹನ

ದೆಹಲಿಯ ಅಂಬೇಡ್ಕರ್ ನಗರದಲ್ಲಿ ಕಾರ್ ಗೆ ಬೆಂಕಿ ಹತ್ತಿದ ಪರಿಣಾಮ, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕಾರಿಗೆ ಬೆಂಕಿ ಹತ್ತಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಿಕ್ಕ ಮೇಲೆ, ಅಗ್ನಿ ಶಾಮಕ ದಳ ಆಗಮಿಸಿತು. ಅಷ್ಟು ಹೊತ್ತಿಗಾಗಲೇ ಕಾರ್ ಬೆಂಕಿಗೆ ಪೂರ್ತಿ ಆಹುತಿಯಾಗಿತ್ತು. ಕಾರ್ ಗೆ ಬೆಂಕಿ ಹತ್ತುತ್ತಿದ್ದಂತೆ ಚಾಲಕ, ಹೊರ ಬರಲು ಯತ್ನಿಸಿದ್ದಾನೆ. ಆದ್ರೆ, ಬೆಂಕಿ ಕಾರ್ ಪೂರ್ತಿ ಆವರಿಸಿದ್ದರಿಂದ ಹೊರ ಬರುವಲ್ಲಿ ವಿಫಲರಾಗಿ, ಪ್ರಾಣವನ್ನು ಕಳೆದುಕೊಂಡಿದ್ದಾನೆ. ಕಾರ್, ಪೇಪರ್ ಗಳನ್ನು ಹೊತ್ತು ಸಾಗಿಸುತ್ತಿತ್ತು ಎಂದು ತಿಳಿದು ಬಂದಿದೆ.

ಘಟನೆಗೆ ನಿಖರ ಕಾರಣ ಏನು ಎಂಬುದು ಇನ್ನು ಪತ್ತೆಯಾಗಿಲ್ಲ. ಪ್ರತ್ಯಕ್ಷದರ್ಶಿಗಳ ಅನುಸಾರ ಬೆಂಕಿ ಹತ್ತಿದ ಕಾರ್ ಗೆ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...