alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗ್ಲಿಲ್ಲ ಅಂತಾ ಹೀಗೆ ಮಾಡೋದಾ..?

download

ಉತ್ತರ ಪ್ರದೇಶದ ಅಜಮ್ಗಡದಲ್ಲಿ ಯುವಕನೊಬ್ಬ ಶಿವನ ಮೂರ್ತಿಯನ್ನು ಭಗ್ನಗೊಳಿಸಿದ್ದಾನೆ. ಮದುವೆಯಾಗದ ಕಾರಣಕ್ಕೆ ಕೋಪಗೊಂಡ ಯುವಕ ಈ ಕೆಲಸ ಮಾಡಿದ್ದಾನೆ.

ಅಜಮ್ಗಡ ಗ್ರಾಮವೊಂದರ ಯುವಕ ಚಂದ್ರಕಾಂತ್ ಸರೋಜ್ ಮದುವೆಯಾಗಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದ ಎನ್ನಲಾಗಿದೆ. ಒಂದು ತಿಂಗಳಾದ್ರೂ ಮದುವೆ ಫಿಕ್ಸ್ ಆಗಲಿಲ್ಲ. ಇದ್ರಿಂದ ಬೇಸರಗೊಂಡ ಚಂದ್ರಕಾಂತ್ ಸರೋಜ್ ಬಸ್ ನಿಲ್ದಾಣದ ಬಳಿ ಇರುವ ಶಿವನ ಮೂರ್ತಿಯನ್ನು ಭಗ್ನಗೊಳಿಸಿದ್ದಾನೆ.

ರಾತ್ರಿ ಶಿವ ಮೂರ್ತಿಯನ್ನು ಭಗ್ನಗೊಳಿಸಿದ್ದ ಎನ್ನಲಾಗಿದೆ. ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದ್ರೆ ಮೂರ್ತಿ ಭಗ್ನಗೊಳಿಸಿರುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ರಸ್ತೆ ತಡೆ ನಡೆಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಮೂರ್ತಿಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ ನಂತ್ರ ಸ್ಥಳೀಯರು ಪ್ರತಿಭಟನೆ ಹಿಂಪಡೆದಿದ್ದಾರೆ.

ಆರೋಪಿ ಅಮೀರ್ ಖಾನ್ ‘ಪಿಕೆ’ ಚಿತ್ರ ನೋಡಿದ್ದ ಎನ್ನಲಾಗಿದೆ. ಅಲ್ಲಿ ಅಮೀರ್ ದೇವರನ್ನು ದ್ವೇಷಿಸ್ತಾರೆ. ಹಾಗಾಗಿ ನಾನು ಹೀಗೆ ಮಾಡಿದೆ ಎಂದಿದ್ದಾನೆ ಚಂದ್ರಕಾಂತ್ ಸರೋಜ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...