alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ನಲ್ಲಿ ಸೆರೆಯಾಯ್ತು ಭೀಕರ ದೃಶ್ಯ

kerala murder 1

ವಿನಾಕಾರಣ ಯುವಕನೊಬ್ಬನನ್ನು ಮನ ಬಂದಂತೆ ಥಳಿಸಿ ಕೊಂದ ಭೀಕರ ಘಟನೆ ಕೇರಳದ ತಿರುವನಂತಪುರಂ ಸಮೀಪ ನಡೆದಿದೆ. ನಾಲ್ವರು ಯುವಕರ ಗುಂಪು ಏಕಾಂಗಿ ಯುವಕನನ್ನು ದೊಣ್ಣೆ, ಕೋಲುಗಳಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕಿದ್ದು, ಇದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದವರೊಬ್ಬರು ಪೊಲೀಸರಿಗೆ ಕೊಟ್ಟಿದ್ದಾರೆ.

ತಿರುವನಂತಪುರಂ ಸಮೀಪದ ಗ್ರಾಮವೊಂದರ ಯುವಕ ಶಬ್ಬೀರ್ ನನ್ನು ಹಾಡಹಗಲೇ ಯುವಕರ ಗುಂಪೊಂದು ಅಟ್ಟಾಡಿಸಿಕೊಂಡು ಬಂದಿದ್ದು, ರಸ್ತೆ ಮಧ್ಯದಲ್ಲಿಯೇ ಮನಬಂದಂತೆ ಥಳಿಸಿದ್ದಾರೆ. ಏಕಾಂಗಿಯಾಗಿದ್ದ ಯುವಕ ಬಿಡುವಂತೆ ಬೇಡಿಕೊಂಡರೂ ಕರುಣೆ ತೋರದೇ ಭೀಕರವಾಗಿ ಥಳಿಸಿದ್ದಾರೆ. ಹೀಗೆ ಅಸಹಾಯಕನಾಗಿದ್ದ ಯುವಕನನ್ನು ಮನಬಂದಂತೆ ಥಳಿಸುವುದನ್ನು ಕಂಡ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಹಲ್ಲೆ ನಡೆಸಿದ ಯುವಕರ ತಂಡದಲ್ಲಿ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದವರು ಪರಾರಿಯಾಗಿದ್ದಾರೆ. ಹೀಗೆ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...