alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಕ್ ನಲ್ಲಿ ಸ್ನೇಹಿತೆ ಜೊತೆ ಲಲ್ಲೆ ಹೊಡೆಯುತ್ತಿದ್ದ ಪತಿಗೆ ಬಿತ್ತು ಗೂಸಾ

rrliance-18

ಪಾಟ್ನಾದ ಪಾರ್ಕೊಂದರಲ್ಲಿ ಗರ್ಲ್ ಫ್ರೆಂಡ್ ಜೊತೆ ಕುಳಿತಿದ್ದ ಪತಿ, ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಲ್ಲಿಯೇ ಪತಿಯ ಮೇಲೆ ಬಂದಿದ್ದ ಭೂತ ಬಿಡಿಸಿದ್ದಾಳೆ ಪತ್ನಿ. ಪಾರ್ಕ್ ನಲ್ಲಿ ನಡೆದ  ಹೈಡ್ರಾಮಾ ನೋಡಿದ್ದಾರೆ ನೂರಾರು ಮಂದಿ. ಅಲ್ಲಿದ್ದ ವ್ಯಕ್ತಿ ಯಾರೋ ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

ಪಾಟ್ನಾದಲ್ಲಿ ವಾಸವಾಗಿರುವ ಮಹಿಳೆಗೆ ತನ್ನ ಗಂಡ ಇನ್ನೊಂದು ಸಂಬಂಧ ಹೊಂದಿದ್ದಾನೆಂಬುದು ತಿಳಿದುಬಂದಿದೆ. ಗಂಡನಿಗೆ ಆಕೆಯಿಂದ ದೂರವಿರುವಂತೆ ಹೇಳಿದ್ದಾಳೆ. ಆದ್ರೆ ಆತ ಒಪ್ಪಲಿಲ್ಲ. ಪಾರ್ಕ್ ನಲ್ಲಿ ಗರ್ಲ್ ಫ್ರೆಂಡ್ ಜೊತೆ ಪತಿ ಕುಳಿತಿದ್ದಾನೆಂಬ ವಿಷಯ ಪತ್ನಿಗೆ ತಿಳಿದಿದೆ. ತನ್ನ ತಾಯಿಯನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದಾಳೆ ಪತ್ನಿ.

ಗಂಡನ ತೋಳಿನಲ್ಲಿ ಇನ್ನೊಬ್ಬಳನ್ನು ನೋಡಿದ ಪತ್ನಿಯ ಕೋಪ ನೆತ್ತಿಗೇರಿದೆ. ಸಿಕ್ಕ ಸಿಕ್ಕ ವಸ್ತು ತೆಗೆದುಕೊಂಡು ಗಂಡನಿಗೆ ಹೊಡೆದಿದ್ದಾಳೆ. ಇದನ್ನು ನೋಡ್ತಾ ಇದ್ದಂತೆ ಗಂಡನ ಗರ್ಲ್ ಫ್ರೆಂಡ್ ಓಡಿಹೋಗಲು ಯತ್ನಿಸಿದ್ದಾಳೆ. ಆದ್ರೆ ಮಹಿಳೆಯ ತಾಯಿ ಆಕೆಯನ್ನು ಹಿಡಿದು ಹೊಡೆದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...