alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿನಿಂದ ಸ್ನಾನ ಮಾಡಿ ‘ಪ್ರತಿಭಟನೆ’ ನಡೆಸಿದ ರೈತ

ಬೇಡಿಕೆಗೆ ಆಗ್ರಹಿಸಿ ಭಿನ್ನ, ಭಿನ್ನವಾಗಿ ಪ್ರತಿಭಟನೆ ಮಾಡೋರನ್ನ ನೋಡಿದ್ದೇವೆ. ಇಂತಹದ್ದೇ ಇನ್ನೊಂದು ಪ್ರತಿಭಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರೈತರೊಬ್ಬರು ಹಾಲಿನ ಬೆಂಬಲ ಬೆಲೆಗೆ ಆಗ್ರಹಿಸಿ ಹಾಲಿನಲ್ಲಿ ಸ್ನಾನ ಮಾಡಿ, ಜಾನುವಾರುಗಳ ಮೈ ತೊಳೆದು ಪ್ರತಿಭಟಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರೈತರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮುಂಬೈನಲ್ಲಿ ಸೋಲಾಪುರ ಮೂಲದ ರೈತ, ಸ್ನಾನ ಹಾಗೂ ಜಾನುವಾರುಗಳನ್ನು ತೊಳೆಯಲು ಸುಮಾರು 35 ಲೀಟರ್ ಹಾಲು ಖರ್ಚು ಮಾಡಿ, ಪ್ರತಿಭಟಿಸಿದ್ದಾರೆ.

ಹಾಲಿನ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಪ್ರತಿಭಟನೆ ಜೋರಾಗಿದೆ. ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಬೆಂಬಲ ಬೆಲೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಹಾಲಿನ ಉತ್ಪಾದನೆಗಳ ಮೇಲಿನ ಜಿ.ಎಸ್.ಟಿ. ತೆಗೆದು ಹಾಕುವಂತೆ ಆಗ್ರಹಿಸಿದ್ದಾರೆ. ರೈತರ ಪ್ರತಿಭಟನೆಯ ಬಿಸಿ ಸಾಮಾನ್ಯ ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರಿದ್ದು, ಕೆಲವು ಕಡೆ ಹಾಲು ಸಿಗದೆ ಜನ ಪರದಾಟ ನಡೆಸಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಮಹಾರಾಷ್ಟ್ರ ರೈತರು, ಸೋಮವಾರ ರಾತ್ರಿ ಬೆಳಗಾವಿಗೆ ಸಾಗಿಸುತ್ತಿದ್ದ ಮೂರು ಟ್ಯಾಂಕರ್ ಹಾಲನ್ನು ತಡೆದು ರಸ್ತೆಗೆ ಚೆಲ್ಲಿದ್ದನ್ನು ಇಲ್ಲಿ ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...