alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರನ್ನು ದೂಷಿಸಿದವನಿಗೆ ಬಿತ್ತು ಗೂಸಾ

man-attacked-for-blaming-modi-for-queue-outside-atmನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಬ್ಯಾಂಕ್ ಹಾಗೂ ಎಟಿಎಂ ಗಳ ಮುಂದೆ ಸಾರ್ವಜನಿಕರು ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ಹೀಗೆ ಎಟಿಎಂ ಒಂದರ ಮುಂದೆ ಜನ ಸಾಲುಗಟ್ಟಿ ನಿಂತಿದ್ದನ್ನು ನೋಡಿದ ವ್ಯಕ್ತಿಯೊಬ್ಬ, ಇದಕ್ಕೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ದೂಷಿಸಿದ್ದಕ್ಕೆ ಆಕ್ರೋಶಗೊಂಡವನೊಬ್ಬ ಆತನ ಮೇಲೆ ಹಲ್ಲೆ ಮಾಡಿದ್ದಾನೆ.

ನವದೆಹಲಿಯ ಜಾತ್ಪುರ್ ಏರಿಯಾದಲ್ಲಿ ಡಿಸೆಂಬರ್ 15 ರಂದು ಈ ಘಟನೆ ನಡೆದಿದ್ದು, 45 ವರ್ಷದ ಲಲ್ಲನ್ ಸಿಂಗ್ ಕುಶ್ವಾ ಎಂಬಾತ ಟಿವಿ ತರಲು ಹೊರಟಿದ್ದಾನೆ. ದಾರಿ ಮಧ್ಯೆ ಇದ್ದ ಎಟಿಎಂ ಮುಂದೆ ಜನ ಕ್ಯೂ ನಿಂತಿರುವುದನ್ನು ಕಂಡ ಆತ, ಇದಕ್ಕೆಲ್ಲಾ ಮೋದಿಯೇ ಕಾರಣ ಎಂದು ಹೇಳಿದ್ದಾನೆ. ಇದನ್ನು ಕೇಳಿಸಿಕೊಂಡ ಕ್ಯೂ ನಲ್ಲಿ ನಿಂತಿದ್ದ ಅತೀಕ್ ಎಂಬಾತ ಹೊರ ಬಂದು ಲಲ್ಲನ್ ಸಿಂಗ್ ಕುಶ್ವಾನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಲಲ್ಲನ್ ಸಿಂಗ್ ಈ ಸಂಬಂಧ ಈಗ ಪೊಲೀಸರಿಗೆ ದೂರು ನೀಡಿದ್ದು, ಅತೀಕ್ ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ 6 ಸಾವಿರ ರೂ. ಗಳನ್ನು ಕಿತ್ತುಕೊಂಡಿದ್ದಾನೆಂದು ಆರೋಪಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...