alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ ಸ್ನೇಹ ಕಳೆದುಕೊಂಡವ ಮಹಿಳೆಗೆ ಕಳಿಸಿದ ಇಂಥ ಉಡುಗೊರೆ

ಮಹಿಳೆ ಒಪ್ಪಿಗೆಯಿಲ್ಲದೆ ಆಕೆ ಮನೆಗೆ ಹೂಗುಚ್ಛ ಕಳುಹಿಸ್ತಿದ್ದ 35 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನೋಯ್ಡಾದ ಸೆಕ್ಟರ್ 11 ರಲ್ಲಿ ಪತಿ ಹಾಗೂ ಮಕ್ಕಳ ಜೊತೆ ವಾಸವಾಗಿದ್ದ ಮಹಿಳೆಗೆ ಹೂಗುಚ್ಛ ಕಳುಹಿಸಲಾಗ್ತಾಯಿತ್ತು. ಆರೋಪಿ ಆದಿತ್ಯ ಜಯಪುರ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಮೆಡಿಕಲ್ ರೆಪ್ರೆಸೆಂಟೆಟಿವ್.

ಫೇಸ್ಬುಕ್ ನಲ್ಲಿ ಆರೋಪಿ ಹಾಗೂ ಮಹಿಳೆ ಮಧ್ಯೆ ಸ್ನೇಹ ಬೆಳೆದಿತ್ತು. 6 ವರ್ಷಗಳ ಹಿಂದೆ ಇಬ್ಬರೂ ಸ್ನೇಹಿತರಾಗಿದ್ದರು. ಆದ್ರೆ ಆತನ ವರ್ತನೆ ಸರಿಯಿರಲಿಲ್ಲ. ಆಗಾಗ ಕರೆ ಮಾಡಿ ಹಿಂಸೆ ನೀಡ್ತಿದ್ದ. ಶಾರೀರಿಕ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡಿದ್ದ. ಹಾಗಾಗಿ 2 ವರ್ಷಗಳ ಹಿಂದೆ ಸ್ನೇಹ ಬಿಟ್ಟಿದ್ದೆ ಎಂದು ಮಹಿಳೆ ಹೇಳಿದ್ದಾಳೆ.

ಆ ನಂತ್ರ ಮಕ್ಕಳನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿ, ಪತಿ ಹತ್ಯೆ ಭಯ ಹುಟ್ಟಿಸಿದ್ದನಂತೆ. 85 ಸಾವಿರ ರೂಪಾಯಿ ನೀಡಿದ್ರೆ ಸುಮ್ಮನಿರುವುದಾಗಿ ಹೇಳಿದ್ದನಂತೆ. ಬೇರೆ ಬೇರೆಯವರ ಹೆಸರಿನಲ್ಲಿ ಹೂಗುಚ್ಛ ಕಳುಹಿಸುತ್ತಿದ್ದನಂತೆ. ಇದ್ರಿಂದ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸ್ನೇಹದ ಹೆಸರಲ್ಲಿ ಹೂ ನೀಡಿದ್ದೆ. ಯಾವುದೇ ದುರುದ್ದೇಶವಿರಲಿಲ್ಲವೆಂದು ಆರೋಪಿ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...