alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತ ಹಾಗೂ ಆತನ ತಾಯಿಯ ಹತ್ಯೆ ಮಾಡಿದ್ದ ಆರೋಪಿ ಅಂದರ್

ನವದೆಹಲಿ: 25 ಸಾವಿರ ರೂಪಾಯಿ ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸಿದ್ದಕ್ಕಾಗಿ ಯುವಕನೊಬ್ಬ ತನ್ನ ಸ್ನೇಹಿತ ಹಾಗೂ ಆತನ ತಾಯಿಯನ್ನು ಹತ್ಯೆ ಮಾಡಿರುವ ಪ್ರಕರಣ ಬಯಲಾಗಿದೆ.

ಹತ್ಯೆ ಮಾಡಿದ ಆರೋಪಿ ಅಂಕಿತ್ ಈಗ ಪೊಲೀಸ್ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ರವಿ ಎಂಬಾತ ತನ್ನ ಕಂಪ್ಯೂಟರ್ ಕೋರ್ಸ್ ಸ್ನೇಹಿತ ಅಂಕಿತ್ ಗೆ ತನ್ನ ತಾಯಿಯಿಂದ 25 ಸಾವಿರ ರೂ. ಸಾಲ‌ ಕೊಡಿಸಿದ್ದ.

ಕೊಟ್ಟ ಸಾಲ ಮರು ಪಾವತಿ ಮಾಡುವಂತೆ ಒತ್ತಡ ಹೆಚ್ಚಾಗುತ್ತಿದ್ದಂತೆ, ಅಂಕಿತ್, ರವಿ ಹಾಗೂ ಆತನ ತಾಯಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ಮೊದಲು ರವಿ ತಾಯಿ ಬೀನಾ (45) ಅವರನ್ನು ಅವರ ಮನೆಯಲ್ಲೇ ಹತ್ಯೆ ಮಾಡಿದ್ದ. ಬಳಿಕ ರವಿ ಮನೆಗೆ ಆಗಮಿಸುತ್ತಿದ್ದಂತೆ ಆತನನ್ನೂ ಚುಚ್ಚಿ ಕೊಂದಿದ್ದ.

ರವಿ ಸಹೋದರಿ ನೀಡಿದ ಸುಳಿವಿನ ಆಧಾರದಲ್ಲಿ ತನಿಖೆ ನಡೆದಿದ್ದು, ಯಾವ ಆಯುಧ ಬಳಸಿ ಕೊಲೆ ಮಾಡಲಾಗಿದೆ ಎಂದು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರ ಶಿಕ್ಷಣದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ರವಿ ಜೀವನ ನಿರ್ವಹಣೆಗಾಗಿ ಡೆಲವರಿ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ .

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...