alex Certify
ಕನ್ನಡ ದುನಿಯಾ       Mobile App
       

Kannada Duniya

ನಾಗಿಣಿಗೆ 5 ಸಾವಿರ ಬೆಲೆ ಕಟ್ಟಿದ್ದೇಕೆ ಗೊತ್ತಾ..?

brajbhan-shahjahanpur

ಅಪರಾಧಿಗಳನ್ನು ಹಿಡಿದು ಕೊಟ್ರೆ ಬಹುಮಾನ ಕೊಡೋದನ್ನು ನಾವು ಕೇಳಿರುತ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ನಾಗಿಣಿಯನ್ನು ಹಿಡಿದು ಕೊಟ್ರೆ ಇಲ್ಲ ಸಾಯಿಸಿದ್ರೆ ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದಾನೆ. ನಾಗಿಣಿ ಆತನ ಮಗನ ಹಿಂದೆ ಬಿದ್ದಿದೆಯಂತೆ. ಮಗ ನಾಗಿಣಿ ಪ್ರೇಮಿ ನಾಗಪ್ಪನನ್ನು ಕೊಂದಿದ್ದು ಇದಕ್ಕೆ ಕಾರಣವಂತೆ.

ಘಟನೆ ನಡೆದಿರುವುದು ಉತ್ತರ ಪ್ರದೇಶದ ಷಹಜಹಾನ್ಪುರ್ ನ ನಿಗೋಹಿ ಬ್ಲಾಕ್ ನ ಹಳ್ಳಿಯೊಂದರಲ್ಲಿ. ಈ ಹಳ್ಳಿಯಲ್ಲಿ ನಾಗಿಣಿ ಬಗ್ಗೆ ಬಿಸಿಬಿಸಿ ಚರ್ಚೆಯಾಗ್ತಿದೆ. ಜನರು ನಾಗಿಣಿಗೆ ಹೆದರಿದ್ದಾರೆ. ನಾಗಿಣಿ ಹಳ್ಳಿಯ ಒಬ್ಬ ಹುಡುಗನ ಹಿಂದೆ ಬಿದ್ದಿದೆ. ಈವರೆಗೆ ನಾಲ್ಕು ಬಾರಿ ಹುಡುಗನ ಮೇಲೆ ದಾಳಿ ನಡೆಸಿದೆಯಂತೆ ನಾಗಿಣಿ. ಆದ್ರೆ ದೇಶಿ ಔಷಧಿಯಿಂದ ಹುಡುಗನ ಜೀವ ಉಳಿದಿದೆ.

ತಂದೆ ಸೋಕೇಂದ್ರ ಸಿಂಗ್ ಮಗ ಬ್ರಜಭನ್ ರಕ್ಷಣೆಗೆ ನಿಂತಿದ್ದಾರೆ. ಬ್ರಜಭನ್ ಹಿಂಬಾಲಿಸುತ್ತಿರುವ ನಾಗಿಣಿಯನ್ನು ಹಿಡಿದ್ರೆ ಅಥವಾ ಸಾಯಿಸಿದ್ರೆ 5 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ತಂದೆ ಘೋಷಣೆ ಮಾಡಿದ್ದಾನೆ. ಎರಡು ವರ್ಷಗಳ ಹಿಂದೆ ತೋಟದಲ್ಲಿ ಸರಸವಾಡ್ತಿದ್ದ ನಾಗ-ನಾಗಿಣಿ ನೋಡಿದ ಹುಡುಗ ನಾಗನನ್ನು ಸಾಯಿಸಿದ್ದನಂತೆ. ಹಾಗಾಗಿ ನಾಗಿಣಿ ಈತನ ಹಿಂದೆ ಬಿದ್ದಿದೆ.

ಆಗಸ್ಟ್ 5ರಂದು ಮನೆಯ ಬಳಿ ಹಾವು ಕಚ್ಚಿತ್ತಂತೆ. ಹಳ್ಳಿಯವರೆಲ್ಲ ಒಂದೇ ಹಾವು ಬ್ರಜಭನ್ ಹಿಂಬಾಲಿಸುತ್ತಿದೆ ಎಂದುಕೊಂಡಿದ್ದಾರೆ. ಆದ್ರೆ ವೈದ್ಯರು ಇದು ಮೂಢನಂಬಿಕೆ ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...