alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಜೊತೆ ಜಗಳ ಮಾಡಿ 3 ಮಕ್ಕಳನ್ನು ನದಿಗೆಸೆದ ಪತಿ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಪಾಪಿ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ನದಿಗೆಸೆದಿದ್ದಾನೆ. ಪತ್ನಿ ಜೊತೆ ಜಗಳ ಮಾಡಿಕೊಂಡ ಆರೋಪಿ ವೆಂಕಟೇಶ್ ಕೋಪಕ್ಕೆ ಬುದ್ದಿಕೊಟ್ಟು ಮಕ್ಕಳನ್ನು ಕಳೆದುಕೊಂಡಿದ್ದಾನೆ. 6 ವರ್ಷದಿಂದ ಮೂರು ವರ್ಷದೊಳಗಿನ ಮೂರು ಗಂಡು ಮಕ್ಕಳನ್ನು ವೆಂಕಟೇಶ್ ನದಿಗೆಸೆದಿದ್ದಾನೆ.

ಸೋಮವಾರ ನದಿಯಲ್ಲಿ ಮೃತದೇಹ ನೋಡಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿ ವೆಂಕಟೇಶ್ ನನ್ನು ವಶಕ್ಕೆ ಪಡೆದಿದ್ದಾರೆ. ಮೊದಲ ಪತ್ನಿಗೆ ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ವೆಂಕಟೇಶ್ ಅಮರಾವತಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ.

ಮೂರು ಮಕ್ಕಳ ತಾಯಿ ಜೊತೆ ಕುಡಿದು ಬಂದು ವೆಂಕಟೇಶ್ ಸದಾ ಜಗಳವಾಡ್ತಿದ್ದ. ಇದ್ರಿಂದ ಬೇಸತ್ತ ಅಮರಾವತಿ ತವರಿಗೆ ಹೋಗಿದ್ದಳು. ಭಾನುವಾರ ಅಲ್ಲಿಗೆ ಹೋದ ವೆಂಕಟೇಶ್ ಪತ್ನಿ ಜೊತೆ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ದಾರಿ ಮಧ್ಯೆ ಮತ್ತೆ ಪತಿ-ಪತ್ನಿ ನಡುವೆ ಗಲಾಟೆ ನಡೆದಿದೆ. ಕೋಪಗೊಂಡ ವೆಂಕಟೇಶ್ ಮೂರು ಮಕ್ಕಳನ್ನು ನದಿಗೆ ಎಸೆದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...