alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ವ್ಯಕ್ತಿ ಅರೆಸ್ಟ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮತ್ತು ಹಿಂದೂ ಧಾರ್ಮಿಕ ಸಂಘಟನೆಯ ಮುಖಂಡನನ್ನು ಬೆದರಿಸಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನ ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಪೊಲೀಸರು ಉಮೇಶ್ ಅಲಿಯಾಸ್ ಲುಕ್ಕಾ ನಗರ್ ಎಂದು ಗುರುತಿಸಿದ್ದಾರೆ. ಡಂಕಾಪುರ್ ಪೊಲೀಸ್ ಸ್ಟೇಷನ್ ನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಹಿಂದೂ ಯುವ ವಾಹಿನಿ ವಲಯದ ಅಧ್ಯಕ್ಷ ನವೀನ್ ಪಂಡಿತ್ ಎಂಬುವವರು ಈ ಸಂಬಂಧ ದೂರು ದಾಖಲು ಮಾಡಿದ್ದಾರೆ.

ನವೀನ್ ಪಂಡಿತ್, ಕಳೆದ ವಾರ ನಡೆದಂತಾ ಅಶ್ಲೀಲ ನೃತ್ಯ ಕಾರ್ಯಕ್ರಮ ಮತ್ತು ಕವ್ವಾಲಿ ಕಾರ್ಯಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಉಮೇಶ್, ಯುಪಿ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ವಾಟ್ಸಾಪ್ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಈ ಸಂಬಂಧ ನವೀನ್ ಪಂಡಿತ್ ದೂರು ದಾಖಲು ಮಾಡಿದ್ದರಿಂದ ತನ್ನ ಸಹಚರರರೊಂದಿಗೆ ಮನೆಗೆ ತೆರಳಿ ಪಿಸ್ತೂಲು ತೋರಿಸಿ ನವೀನ್ ಪಂಡಿತ್ ನನ್ನ ಹೆದರಿಸಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕು ಸೋಮವಾರ ಮುಂಜಾನೆ ಆತನನ್ನ ಮನೆಯಿಂದಲೇ ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...