alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್‌ ಕಳ್ಳನನ್ನು ಹಿಡಿಯಲು ಹೋಗಿ ಜೀವವನ್ನೇ ಕಳೆದುಕೊಂಡ

ಮುಂಬಯಿ: ಮೊಬೈಲ್‌ ಕದ್ದವನನ್ನು ಹಿಡಿಯಲು ಮುಂದಾಗಿ, ಚಲಿಸುತ್ತಿರುವ ರೈಲಿನಿಂದ ಹಾರಿದ ಪ್ರಯಾಣಿಕ ಮೃತಪಟ್ಟ ದಾರುಣ ಘಟನೆ ಮುಂಬೈ ನಿಲ್ದಾಣದಲ್ಲಿ ನಡೆದಿದೆ.

ಈ ಸಂಬಂಧ 19 ವರ್ಷದ ಸೋಲಂಕಿ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ.19 ರಂದು ಘಟನೆ ನಡೆದಿದ್ದು, ಮೃತಪಟ್ಟವರನ್ನು ನಾಸಿಕ್‌ ಮೂಲದ ವೈದ್ಯಕೀಯ ವೃತ್ತಿಯ ಅಹಿರೋ(35) ಎಂದು ಗುರುತಿಸಲಾಗಿದೆ.

ಲೋಕಲ್‌ ಟ್ರೇನ್‌ನಲ್ಲಿ ಸಾಗುವ ವೇಳೆ, ರೈಲಿನ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದ ಅಹಿರೂ ಮೊಬೈಲ್‌ ಫೋನನ್ನು ಸೋಲಂಕಿ ಎಗರಿಸಿದ್ದಾನೆ. ಇದನ್ನು ಗುರುತಿಸಿದ ಅಹಿರೋ, ಕಳ್ಳನನ್ನು ಹಿಡಿಯಲು ಚಲಿಸುತ್ತಿದ್ದ ರೈಲಿನಿಂದ ಹಾರಿದ್ದಾರೆ. ಗಂಭೀರ ಗಾಯಗಳಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ರೈಲಿನಿಂದ ಇಳಿಯುವ ವೇಳೆ ಅಫಘಾತ ಉಂಟಾಗಿ ಅಹಿರೋ ಮೃತಪಟ್ಟಿರುವುದಾಗಿ ಆರಂಭಿಕ ತನಿಖೆಯಲ್ಲಿ ಭಾವಿಸಲಾಗಿತ್ತು. ಆದರೆ ಅವರ ಮೊಬೈಲ್ ಫೋನ್‌ ಸಿಕ್ಕಿರಲಿಲ್ಲ. ಈ ವೇಳೆ ಅನುಮಾನಗೊಂಡು ರೈಲ್ವೆ ನಿಲ್ದಾಣದ ಸಿಸಿ ಟಿವಿ ಪರಿಶೀಲಿಸಿದಾಗ ನಡೆದಿರುವ ವಿಚಾರ ಗೊತ್ತಾಗಿದೆ. ನಿಲ್ದಾಣದ ಬಳಿ ಇರುವ ಕೊಳಚೆ ಪ್ರದೇಶದಿಂದ ಸೋಲಂಕಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...