alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಟರಿಯನ್ನು ಮೈಕ್ ಎಂದುಕೊಂಡ್ರು ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫೈರ್ ಬ್ರ್ಯಾಂಡ್ ಎಂದೇ ಹೆಸರಾದವರು. ಕಠಿಣ ನಿಲುವು ತಳೆಯುವ ಮುಖಂಡರ ಪಟ್ಟಿಯಲ್ಲಿ ಮಮತಾ ಹೆಸರಿದೆ. ಇತ್ತೀಚಿನ ದಿನಗಳಲ್ಲಿ ಮಮತಾ ಬ್ಯಾನರ್ಜಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಬ್ಯಾಟರಿಯೊಂದನ್ನು ಮೈಕ್ ಎಂದುಕೊಂಡು ಅದ್ರ ಮುಂದೆ ಭಾಷಣ ಮಾಡ್ತಿರುವ ವಿಡಿಯೋ ಇದಾಗಿದೆ.

ಮಮತಾ ಬ್ಯಾನರ್ಜಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಾರ್ಯಕರ್ತರೊಬ್ಬರು ಬ್ಯಾಟರಿ ಕೈನಲ್ಲಿ ಹಿಡಿದಿದ್ದರು. ಅದನ್ನು ಮೈಕ್ ಎಂದುಕೊಂಡ ಮಮತಾ ಬ್ಯಾಟರಿ ಕೈನಲ್ಲಿ ಹಿಡಿದು ಭಾಷಣ ಶುರುಮಾಡಿದ್ದಾರೆ. ಅದನ್ನು ನೋಡಿದ ಜನರು ನಗಲು ಶುರುಮಾಡಿದ್ದಾರೆ. ಜನ ಯಾಕೆ ನಗುತ್ತಿದ್ದಾರೆಂಬ ವಿಷ್ಯ ಗೊತ್ತಾದ ಮೇಲೆ ಮಮತಾ ಬ್ಯಾನರ್ಜಿ ಕೂಡ ನಕ್ಕಿದ್ದಾರೆ.

ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 16 ಸೆಕೆಂಡ್ ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...