alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತ್ ಶಾ ಬರುವ ರಸ್ತೆಯಲ್ಲಿ ರಾರಾಜಿಸುತ್ತಿದೆ ಮಮತಾ ಪೋಸ್ಟರ್

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಶ್ಚಿಮ ಬಂಗಾಳ ಭೇಟಿಗೂ ಮುನ್ನ ಪೋಸ್ಟರ್ ವಾರ್ ಶುರುವಾಗಿದೆ. ಅಮಿತ್ ಶಾ ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಗುರುವಾರ ಶುರುವಾಗಲಿದೆ. ಅಮಿತ್ ಶಾ ಗುರುವಾರ ಬಿರ್ಬುಮ್ ತಲುಪಲಿದ್ದಾರೆ. ಅಮಿತ್ ಶಾಗೆ ಟಕ್ಕರ್ ನೀಡಲು ಸಿಎಂ ಮಮತಾ ಬ್ಯಾನರ್ಜಿ ಸಿದ್ಧವಾಗಿದ್ದಾರೆ. ರಾಮ್ಪುರದಿಂದ ಬಿರ್ಬುಮ್ ವರೆಗಿನ ರಸ್ತೆಯಲ್ಲಿ ಮಮತಾ ಬ್ಯಾನರ್ಜಿ ಪೋಸ್ಟರ್ ರಾರಾಜಿಸುತ್ತಿದೆ.

ಟಿಎಂಸಿ ಮುಖಂಡರು ಹಾಗೂ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಜಿಲ್ಲಾಧ್ಯಕ್ಷರ ಪೋಸ್ಟರ್ ಗಳನ್ನು ರಸ್ತೆ ತುಂಬ ಹಾಕಲಾಗಿದೆ. ಅಮಿತ್ ಶಾ ಹೆಲಿಕಾಪ್ಟರ್ ಮೂಲಕ ಬಿರ್ಬುಮ್ ಗೆ ಬರಲಿದ್ದಾರೆ. ಗುರುವಾರ ತಾರಾಪೀಠದ ಕಾಳಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಹೆಲಿಪ್ಯಾಡ್ ನಿಂದ 5 ಕಿಲೋಮೀಟರ್ ದೂರವಿರುವ ಕಾಳಿ ದೇವಸ್ಥಾನಕ್ಕೆ ಅಮಿತ್ ಶಾ ಕಾರಿನಲ್ಲಿ ತೆರಳಲಿದ್ದಾರೆ. ಈ ರಸ್ತೆ ಸಂಪೂರ್ಣ ಮಮತಾ ಬ್ಯಾನರ್ಜಿ ಪೋಸ್ಟರ್ ನಿಂದ ರಾರಾಜಿಸುತ್ತಿದೆ.

ಮಮತಾ ಬ್ಯಾನರ್ಜಿ ನಗುತ್ತಿರುವ ಕೆಲ ಪೋಸ್ಟರ್ ಗಳಿದ್ದರೆ ಮತ್ತೆ ಕೆಲ ಪೋಸ್ಟರ್ ಗಳಲ್ಲಿ ಮಮತಾ ಬ್ಯಾನರ್ಜಿ ಕೈ ಮುಗಿದು ನಿಂತಿದ್ದಾರೆ. ತಾರಾಪೀಠಕ್ಕೆ ಬಂದ ಎಲ್ಲ ಭಕ್ತರಿಗೂ ಸ್ವಾಗತ ಎಂದು ಬಂಗಾಳಿ ಹಾಗೂ ಹಿಂದಿಯಲ್ಲಿ ಬರೆಯಲಾಗಿದೆ. ಸೋಮವಾರ ಪಕ್ಷದ ಜಿಲ್ಲಾ ಕಚೇರಿಯಿಂದ ಈ ಪೋಸ್ಟರ್ ಗಳನ್ನು ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...