alex Certify
ಕನ್ನಡ ದುನಿಯಾ       Mobile App
       

Kannada Duniya

ದುರ್ಗಾ ಪೂಜೆಗೆ ಬಂಗಾಳ ಸಿಎಂ ಕೊಡುಗೆ ಏನು ಗೊತ್ತಾ…?

ಬಂಗಾಳದಲ್ಲಿ ಈಗ ನವರಾತ್ರಿ ಭಾಗವಾಗಿ ದುರ್ಗಾ ಪೂಜೆ ಉತ್ಸವದ ಸಂಭ್ರಮ ಮನೆ ಮಾಡಿದೆ. ಇದೇ ವೇಳೆ ಅಲ್ಲಿ ಸಿಎಂ ರಚಿಸಿರುವ ಏಳು ಹಾಡುಗಳ ರೌದ್ರಾಯಚ ಎಂಬ ಆಲ್ಬಂ ಬಿಡುಗಡೆಗೊಳ್ಳುತ್ತಿದೆ. ಅಂದಹಾಗೆ ಈ ಆಲ್ಬಂನಲ್ಲಿರುವ ಹಾಡುಗಳು ದುರ್ಗಾ ಪೂಜೆಗೆ ಸಂಬಂಧಿಸಿದ್ದಾಗಿದೆ.

ಕಾರ್ಯದೊತ್ತಡದ ನಡುವೆಯೂ ತಮ್ಮ ಕ್ರಿಯಾಶೀಲತೆಯನ್ನು ಅಕ್ಷರ ರೂಪಕ್ಕೆ ಇಳಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಹಾಡುಗಳನ್ನು ಬಂಗಾಳಿ ಖ್ಯಾತ ಹಾಡುಗಾರರಾದ ಇಂದ್ರಾನಿಲ್, ಲೋಪಮುದ್ರ ಹಾಗೂ ರೂಪಂಕರ್ ಅವರಿಂದ ಹಾಡಿಸಿದ್ದಾರೆ.

ಈ ಸಂಗತಿಯನ್ನು ತಮ್ಮ ಟ್ವೀಟರ್ನಲ್ಲಿ ಹಂಚಿಕೊಂಡಿದ್ದು, ನಾನು ಬರೆದ ಏಳು ದುರ್ಗಾಪೂಜೆ ಹಾಡುಗಳನ್ನೊಳಗೊಂಡ ರೌದ್ರಾಯಚ ಪೂಜಾ ಆಲ್ಬಂ ಕೇಳಿ ಎಂದು ಲಿಂಕ್ ಕೂಡ ನೀಡಿದ್ದಾರೆ.

ಕಳೆದ ತಿಂಗಳು ರಾಜ್ಯದ 28 ಸಾವಿರ ದುರ್ಗಾಪೂಜೆ ಸಮಿತಿಗಳಿಗೆ 28 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಈ ವಿಚಾರಕ್ಕೂ ಪ್ರತಿಕ್ರಿಯೆ ನೀಡಿ, ನನ್ನ ಸರ್ಕಾರ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಉದ್ದೇಶದಿಂದ ಪ್ರತಿ ಪೂಜಾ ಸಮಿತಿಗೆ 10 ಸಾವಿರ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಬಂಗಾಳದಲ್ಲಿ ದುರ್ಗಾಪೂಜೆ ಆಚರಣೆಗಳು ಅಕ್ಟೋಬರ್ 14 ರಿಂದ 19 ರವರೆಗೆ ನಡೆಯುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...