alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಭಾರತದ 13 ವಿವಿಐಪಿ ಗಳ ಐಫೋನ್ ಮೇಲೆ ಮಾಲ್ವೇರ್ ದಾಳಿ

ದೇಶದ 13 ವಿವಿಐಪಿಗಳ ಐಫೋನ್ ನಲ್ಲಿರುವ ಡೇಟಾ ಕಳ್ಳತನವಾಗಿರುವ ಶಂಕೆ ವ್ಯಕ್ತವಾಗಿದೆ. ವಿವಿಐಪಿಗಳ ಐಫೋನ್ ನಿಂದ ಸಂದೇಶ, ವಾಟ್ಸಾಪ್ ಲೊಕೇಷನ್, ಚಾಟ್ ಲಾಗ್, ಫೋಟೋ ಹಾಗೂ ಸಂಪರ್ಕದ ಮಾಹಿತಿಗಳನ್ನು ಕದಿಯಲಾಗಿದೆಯಂತೆ. ಕಮರ್ಷಿಯಲ್ ಥ್ರೆಟ್ ಇಂಟೆಲಿಜೆನ್ಸ್ ಗ್ರೂಪ್ ಸಿಸ್ಕೋ ಸಂಶೋಧಕರು ಹಾಗೂ ವಿಶ್ಲೇಷಕರು ಇದು ಉನ್ನತ ಮಟ್ಟದ ದಾಳಿ ಎಂದಿದ್ದಾರೆ.

ಅನುಮಾನಾಸ್ಪದ ಅಪ್ಲಿಕೇಷನ್ ಸಹಾರಿಂದ ವಿವಿಐಪಿಗಳ ಐಫೋನ್ ನಲ್ಲಿರುವ ಮಾಹಿತಿಯನ್ನು ಅಪಹರಿಸಲಾಗಿದೆ. ಡೇಟಾ ಕಳ್ಳತನವಾದ ವಿವಿಐಪಿಗಳು ಯಾರೆಂದು ಸಂಶೋಧಕರು ಬಹಿರಂಗಪಡಿಸಿಲ್ಲ. ಹ್ಯಾಕರ್ಸ್ ಭಾರತದವರೆ ಆಗಿದ್ದು, ರಷ್ಯಾ ಮೂಲವನ್ನು ತೋರಿಸುವ ಯತ್ನ ನಡೆಸುತ್ತಿದ್ದಾರೆಂದು ಸಿಸ್ಕೋ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ.

ಹ್ಯಾಕರ್ಸ್ ರಷ್ಯಾ ಹೆಸರು ಹಾಗೂ ರಷ್ಯಾದ ಇ-ಮೇಲ್ ಡೊಮೇನ್ ಹೆಸರನ್ನು ಬಳಸಿದ್ದಾರೆ. ಎರಡು ಸಾಧನದ ಮೂಲಕ ಭಾರತದ ವೋಡಾಫೋನ್ ನೆಟ್ವರ್ಕ್ ಅನ್ನು ಡೇಟಾ ಕಳ್ಳತನಕ್ಕೆ ಬಳಸಿಕೊಂಡಿದ್ದಾರೆ. ಪೂರ್ಣ ತಯಾರಿಯೊಂದಿಗೆ ಬಳಕೆದಾರರು ಸತತ ಮೂರು ವರ್ಷಗಳಿಂದ ಡೇಟಾ ಕಳ್ಳತನ ಮಾಡ್ತಿದ್ದಾರೆ. ಈ ಬಗ್ಗೆ ಐಫೋನ್ ಬಳಕೆದಾರರಿಗೆ ತಿಳಿದಿಲ್ಲವೆಂದು ತಜ್ಞರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...