alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಎಸ್.ಬಿ.ಐ. ಮಾಡಿರುವ ಮಹಾ ಎಡವಟ್ಟು

ದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ವಿದೇಶಕ್ಕೆ ಹಾರುವುದನ್ನು ತಡೆಯಲು ಎಸ್.ಬಿ.ಐ. ಆಡಳಿತ ಮಂಡಳಿಗೆ ಅವಕಾಶವಿದ್ದರೂ, ಅದನ್ನು ಮಾಡದೇ ವಿದೇಶಕ್ಕೆ ಹಾರಲು ಅನುಕೂಲ ಮಾಡಿಕೊಡಲಾಗಿದೆಯೇ ಎನ್ನುವ ಹೊಸ ವಿವಾದ ಶುರುವಾಗಿದೆ.

ವಿಜಯ್ ಮಲ್ಯ‌ ಇಂಗ್ಲೆಂಡ್ ಗೆ ಹೋಗುವ ನಾಲ್ಕು ದಿನದ ಮೊದಲೇ, ಇದನ್ನು ತಡೆಯಲು‌ ಸುಪ್ರೀಂ ಕೋರ್ಟ್ ನಲ್ಲಿ‌ ಅರ್ಜಿ ಸಲ್ಲಿಸಲು ಎಸ್.ಬಿ.ಐ. ಕಾನೂನು ಸಲಹೆಗಾರ ದುಷ್ಯಂತ್ ದಾವೆ, ಬ್ಯಾಂಕಿನ ಉನ್ನತ ಮಟ್ಟದ ಸಭೆಯಲ್ಲಿ ಸಲಹೆ ನೀಡಿದ್ದರು. ಆದರೆ ಈ ಬಗ್ಗೆ ಅಂದಿನ ಎಸ್.ಬಿ.ಐ. ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹಾಗೂ ಇತರೆ ಸದಸ್ಯರು ಗಮನ ಹರಿಸಿಲ್ಲ ಎಂದು ದಾವೆ ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ದಾವೆ, 2016 ಫೆಬ್ರವರಿಯಲ್ಲಿ ಮಲ್ಯ ವಿದೇಶಕ್ಕೆ ಹಾರುವ ಮೊದಲೇ ಸುಪ್ರೀಂ ಕೋರ್ಟ್ ನಲ್ಲಿ ಈ ಪ್ರಯಾಣವನ್ನು ತಡೆಯಲು ಅರ್ಜಿ‌ ಸಲ್ಲಿಸಬಹುದಾಗಿತ್ತು. ಈ ಸಲಹೆಯನ್ನು ನೀಡಿದ್ದರೂ, ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಾಲ್ಕು ಜನರಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿತ್ತು ಎಂದಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿರುವ, ಮಾಜಿ ಅಧ್ಯಕ್ಷೆ ಅರುಂಧತಿ, ಸದ್ಯ ನಾನು ಎಸ್.ಬಿ.ಐ. ಅಧ್ಯಕ್ಷ ಸ್ಥಾನದಲ್ಲಿ ಇಲ್ಲ‌. ಆದ್ದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಷ್ಟೆ ಹೇಳಿದ್ದಾರೆ.

ಎಸ್.ಬಿ.ಐ. ವಕ್ತಾರರ ಪ್ರಕಾರ, ಬ್ಯಾಂಕಿನ ಆಡಳಿತ ಮಂಡಳಿ ಅಥವಾ ಸಿಬ್ಬಂದಿ ಸಾಲ ವಸೂಲಿಯಲ್ಲಿ ಯಾವುದೇ ತಪ್ಪು ಹೆಜ್ಜೆ ಇಟ್ಟಿಲ್ಲ. ಸಾಲ ವಸೂಲಿಗೆ ಅಗತ್ಯ ಹೋರಾಟ ನಡೆಸುತ್ತಿದ್ದಾರೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...