alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಕಾಂತ್ ಭೇಟಿಯಾದ ಮಲೇಷಿಯಾ ಪಿಎಂ

rajni_5kbbmca

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಮಲೇಷಿಯಾದ ಪ್ರಧಾನ ಮಂತ್ರಿ ನಜಿಬ್ ರಜಾಕ್ ತಮಿಳು ಸೂಪರ್ ಸ್ಟಾರ್ ರಜನಿ ಕಾಂತ್ ರನ್ನು ಭೇಟಿ ಮಾಡಿದ್ದಾರೆ. ಶುಕ್ರವಾರ ರಜನಿ ಮನೆಗೆ ತೆರಳಿದ ನಜಿಬ್, ಕಬಾಲಿ ಜೊತೆ ಆಪ್ತ ಮಾತುಕತೆ ನಡೆಸಿದ್ದಾರೆ. ಇಬ್ಬರು ನೆನಪಿಗಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ನಜಿಬ್ ಗುರುವಾರ ಚೆನ್ನೈಗೆ ಬಂದಿಳಿದಿದ್ದರು. ಶುಕ್ರವಾರ ಬೆಳಿಗ್ಗೆ ರಜನಿ ಭೇಟಿಯಾಗಿದ್ದು, ಮಧ್ಯಾಹ್ನ ಮಸೀದಿಯೊಂದರಲ್ಲಿ ನಮಾಜ್ ಮಾಡಿ ಸಂಜೆ ದೆಹಲಿಗೆ ತೆರಳಲಿದ್ದಾರೆ. ರಜನಿ ನಟಿಸಿರುವ ‘ಕಬಾಲಿ’ ಮಲೇಷಿಯಾದಲ್ಲಿ ನೆಲೆಸಿರುವ ತಮಿಳರನ್ನು ಆಧಾರಿಸಿತ್ತು. ಚಿತ್ರದ ಶೂಟಿಂಗ್ ವೇಳೆ ರಜನಿ ಮಲೇಷಿಯಾಕ್ಕೆ ತೆರಳಿದ್ದರು. ಅಲ್ಲಿ ನಜಿಬ್ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿಕೊಟ್ಟಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...