alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡು ಮಗು ಪಡೆಯಲು ನೀಡಲಾಗಿತ್ತು ಟಿಪ್ಸ್..!

bump

‘ಗಂಡು ಮಗು ಪಡೆಯಲು ಕೆಲವು ಸಲಹೆಗಳು’ ಅನ್ನೋ ಲೇಖನವೊಂದು ಮಲಯಾಳಂ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮಗುವಿನ ಜನನಕ್ಕೂ ಮುನ್ನ ಲಿಂಗ ಪರೀಕ್ಷೆ ಶಿಕ್ಷಾರ್ಹ ಅಪರಾಧ. ಆದ್ರೂ ಮಲಯಾಳಂ ಪತ್ರಿಕೆ, ಗಂಡು ಮಗು ಪಡೆಯುವ ವೈಜ್ಞಾನಿಕ ವಿಧಾನ ಯಾವುದು ಅನ್ನೋ ಬಗ್ಗೆ ಲೇಖನವೊಂದನ್ನು ಪ್ರಕಟಿಸಿದೆ.

ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಲಹೆಯ ಪ್ರಕಾರ ಗಂಡು ಮಗು ಪಡೆಯಲು ಯಾವುದೇ ತ್ಯಾಗ ಮಾಡಬೇಕಾಗಿಲ್ಲ, ಮಹಿಳೆಯರ ಮೇಲೆ ಯಾವ ಭಾರವೂ ಇಲ್ಲ. ಮಗುವಿನ ಲಿಂಗ ನಿರ್ಧರಿಸುವುದರಲ್ಲಿ ಪ್ರಮುಖ ಪಾತ್ರ ಪುರುಷರದ್ದು.

ಈಗಲೂ ಭಾರತದಲ್ಲಿ ಹೆತ್ತವರು ಗಂಡುಮಗುವಿಗಾಗಿ ಹಂಬಲಿಸುತ್ತಾರೆ. ಮಗುವಿನ ಲಿಂಗ ಪರೀಕ್ಷೆ ಅಪರಾಧವಾಗಿದ್ದರೂ, ಹೆಣ್ಣು ಮಗು ಅನ್ನೋ ಕಾರಣಕ್ಕೆ ಭ್ರೂಣ ಹತ್ಯೆ ಮಾಡಲಾಗ್ತಿದೆ. ಇದರ ಪರಿಣಾಮ ದೇಶದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. 2011ರ ಜನಗಣತಿ ಪ್ರಕಾರ ಭಾರತದಲ್ಲಿ 1000 ಗಂಡುಮಕ್ಕಳಿಗೆ ಇರುವುದು 940 ಹೆಣ್ಣುಮಕ್ಕಳು ಮಾತ್ರ.

ಪತ್ರಿಕೆಯಲ್ಲಿ ಹೇಳಿರುವ  ಮಾರ್ಗಗಳಿಂದ ನೂರಕ್ಕೆ ನೂರರಷ್ಟು ಗಂಡು ಮಗು ಜನಿಸುತ್ತದೆ ಎಂದು ಖಚಿತಪಡಿಸಿಲ್ಲ. ಗಂಡು ಮಗು ಜನನದ ಅವಕಾಶ ಹೆಚ್ಚು ಎಂದಷ್ಟೆ ಹೇಳಲಾಗಿದೆ. ಪತ್ರಿಕೆಯಲ್ಲಿ ಗಂಡು ಮಗು ಪಡೆಯುವುದು ಹೇಗೆ ಎಂಬುದರ ಕುರಿತು ಸಾಕಷ್ಟು ಟಿಪ್ಸ್ ಕೊಡಲಾಗಿದೆ. ಸದ್ಯ ಈ ಲೇಖನವನ್ನು ವೆಬ್ ಸೈಟ್ ನಿಂದ ಡಿಲೀಟ್ ಮಾಡಲಾಗಿದೆ. ಆದ್ರೂ ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...