alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಗಲಿದೆಯಾ ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ಗುಟ್ಟು…?

ಸುಭಾಷ್ ಚಂದ್ರ ಬೋಸ್ ಅವರ ಸಾವಿನ‌ ಕಾರಣ‌ ಬಯಲಿಗೆ ‌ಮುಂದಾಗಿದ್ದ, ಮೋದಿ ನೇತೃತ್ವದ ಸರಕಾರಕ್ಕೆ ಇದೀಗ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮರಣದ ಗುಟ್ಟನ್ನು ಬಯಲು ಮಾಡುವಂತೆ ಕೇಂದ್ರ ಮಾಹಿತಿ ‌ಆಯೋಗ ಕೇಂದ್ರಕ್ಕೆ ಸೂಚನೆ ನೀಡಿದೆ.

ಮಾಹಿತಿ ಹಕ್ಕು ಕಾರ್ಯಕರ್ತ‌ ನವ್ ದೀಪ್ ಸಲ್ಲಿಸಿರುವ ಅರ್ಜಿಗೆ ಪೂರಕವಾಗಿ, ಕೇಂದ್ರ ಮಾಹಿತಿ ಹಕ್ಕು ಅಧಿಕಾರಿಗಳು, ದಾಖಲೆ ಪರಿಶೀಲಿಸಿದ್ದಾರೆ. ಆದರೆ ಶಾಸ್ತ್ರಿ ಸಾವಿನ ರಹಸ್ಯ ಭೇದಿಸಲು ರಾಜ್ ನರೈನ್ ಅವರ ನೇತೃತ್ವದ ಸಮಿತಿ ನಡೆಸಿದ ತನಿಖಾ‌ ವರದಿಯಲ್ಲಿ ಯಾವುದೇ ದಾಖಲೆಗಳಿಲ್ಲ ಎನ್ನುವ ಅಚ್ಚರಿಯನ್ನು ವ್ಯಕ್ತಪಡಿಸಿರುವ ಮಾಹಿತಿ ಆಯೋಗದ ಅಧ್ಯಕ್ಷ ಶ್ರೀಧರ್ ಅಚ್ಚುರಾಯಲು, ದಾಖಲೆಗಳು ಏನಾಗಿವೆ ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಹಲವು‌ ಅನುಮಾನಗಳಿಗೆ ಕಾರಣವಾಗಿರುವ ಶಾಸ್ತ್ರಿ‌ ಸಾವಿನ‌ ಬಗ್ಗೆ ಪ್ರಧಾನಿ ಹಾಗೂ‌‌ ವಿದೇಶಾಂಗ ಇಲಾಖೆಯಲ್ಲಿರುವ ಎಲ್ಲ ಕಡತಗಳನ್ನು‌ ಸಾರ್ವಜನಿಕ ವಲಯಕ್ಕೆ ನೀಡುವಂತೆ ಸೂಚಿಸಿದ್ದು, ಇದೀಗ ಯಾವ ದಾಖಲೆಗಳು‌ ಹೊರ ಬೀಳಲಿವೆ ಎನ್ನುವ ಕುತೂಹಲಕ್ಕೆ ಕಾರಣವಾಗಿದೆ.

ವಿದೇಶದಲ್ಲಿ ಮರಣ ಹೊಂದಿದ ಶಾಸ್ತ್ರಿ ಅವರ ಸಾವಿಗೆ‌ ನಿಜವಾದ ಕಾರಣವೇನು ಎನ್ನುವುದನ್ನು ಅವರ ಕುಟುಂಬಸ್ಥರು‌ ಹಾಗೂ ದೇಶದ ಜನರು ತಿಳಿಯಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...