alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಮಲದಲ್ಲಿ ನಡೆದಿದೆ ದೊಡ್ಡ ಅನಾಹುತ

ttd-fir

ತಿರುಪತಿ: ತಿರುಪತಿ ತಿರುಮಲದ ಬೆಟ್ಟದಲ್ಲಿ ಭಾರೀ ಬೆಂಕಿ ತಗುಲಿದ್ದು, 5 -6 ಎಕರೆಯಷ್ಟು ದಟ್ಟವಾದ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ಧರ್ಮಗಿರಿ ವೇದ ಪಾಠಶಾಲಾ ಸಮೀಪದ ಶೇಷಾಚಲ ಬೆಟ್ಟದಲ್ಲಿ ದಟ್ಟವಾದ ಅರಣ್ಯವಿದ್ದು, ಇಲ್ಲಿ ಭಾನುವಾರ ಸಂಜೆಯಿಂದ ಬೆಂಕಿ ಕಾಣಿಸಿಕೊಂಡಿದೆ.

ಅಗ್ನಿಶಾಮಕ ದಳದ ನೂರಾರು ಸಿಬ್ಬಂದಿ ಹಾಗೂ ತಿರುಮಲದ ದೇವಾಲಯದ ಸಿಬ್ಬಂದಿ ಸತತವಾಗಿ ಕಾರ್ಯಾಚರಣೆ ನಡೆಸಿದ್ದು, ಭಾರಿ ಬಿಸಿಲು ಮತ್ತು ಗಾಳಿಯ ರಭಸದಿಂದಾಗಿ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ.

ಇಡೀ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಸಂಜೆಯ ವೇಳೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಕಾರ್ಯಾಚರಣೆ ಮುಂದುವರೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...