alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್ಮಿ ಅಧಿಕಾರಿ ಪತ್ನಿ ಬಲಿ ಪಡೀತು ಮೇಜರ್ ಜೊತೆಗಿನ ಅಕ್ರಮ ಸಂಬಂಧ

ದೆಹಲಿಯಲ್ಲಿ ನಡೆದ ಆರ್ಮಿ ಮೇಜರ್ ಪತ್ನಿ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ 24 ಗಂಟೆಯಲ್ಲಿ ಮಿಲಿಟರಿ ಅಧಿಕಾರಿ ನಿಖಿಲ್ ಹುಂಡಾರನ್ನು ಬಂಧಿಸಿದ್ದಾರೆ. ಪೊಲೀಸರು ಮೇಜರ್ ನಿಖಿಲ್ ನನ್ನು ಮೀರತ್ ನಲ್ಲಿ ಬಂಧಿಸಿದ್ದಾರೆ.

ಶನಿವಾರ ಕೆಂಟ್ ಪ್ರದೇಶದಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿತ್ತು. ರಸ್ತೆ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ ಎನ್ನಲಾಗಿತ್ತು. ಈ ಮಧ್ಯೆ ಮೇಯರ್ ಅಮಿತ್ ಪತ್ನಿ ಶೈಲಜಾ ಬೆಳಿಗ್ಗೆ ಆಸ್ಪತ್ರೆಗೆ ಹೋಗಿದ್ದಳು. ಆಸ್ಪತ್ರೆ ಬಳಿ ಅವ್ರನ್ನು ಕಾರು ಚಾಲಕ ಬಿಟ್ಟು ಬಂದಿದ್ದ. ವಾಪಸ್ ಹೋದಾಗ ಶೈಲಜಾ ಅಲ್ಲಿರಲಿಲ್ಲ. ಸಂಜೆ ನಾಲ್ಕು ಗಂಟೆಯಾದ್ರೂ ಮನೆಗೆ ಬರದ ಕಾರಣ ಮೇಜರ್ ದೂರು ನೀಡಿದ್ದರು.

ಈ ಮಧ್ಯೆ ಸಿಕ್ಕ ಮಹಿಳೆ ಶವದ ಗುರುತು ಪತ್ತೆಯಾಗಿತ್ತು. ಶೈಲಜಾಳನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ವಿಚಾರಣೆ ಚುರುಕುಗೊಳಿಸಿದ ಪೊಲೀಸರಿಗೆ ಶೈಲಜಾ ಫೋನ್ ನಲ್ಲಿ ನಿಖಿಲ್ ನಂಬರ್ ಸಿಕ್ಕಿದೆ. ನಿಖಿಲ್ ಶೈಲಜಾಳಿಗೆ ಪದೇ ಪದೇ ಫೋನ್ ಮಾಡಿದ್ದಾನೆ. ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು ಎಂಬ ಸಂಶಯವಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮೃತ ಶೈಲಜಾ ಪತ್ರಿಕೆಯ ಮುಖಪುಟದಲ್ಲಿ ಮಿಂಚಿದ್ದಳು. ಫ್ಯಾಷನ್ ಬಗ್ಗೆ ಹೆಚ್ಚು ಅಭಿರುಚಿ ಹೊಂದಿದ್ದಳು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...