alex Certify
ಕನ್ನಡ ದುನಿಯಾ       Mobile App
       

Kannada Duniya

ಡಾಕ್ಟರ್ ಸರ್ಟಿಫಿಕೇಟ್ ಕದ್ದ ಕೆಲಸದಾಕೆ ಮಾಡಿದ್ದೇನು ಗೊತ್ತಾ?

ಛತ್ತೀಸ್ಗಡದಲ್ಲಿ ಸಿನಿಮಾ ರೀತಿಯ ಘಟನೆಯೊಂದು ನಡೆದಿದೆ. ಮನೆ ಮಾಲೀಕೆ ಮಗಳ ಡಾಕ್ಟರ್ ಸರ್ಟಿಫಿಕೇಟ್ ಕದ್ದ ಕೆಲಸದಾಕೆ ಸರ್ಟಿಫಿಕೇಟ್ ಮೇಲೆ ತನ್ನ ಫೋಟೋ ಅಂಟಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಳಾಗಿ ಕೆಲಸ ಮಾಡಿದ್ದಾಳೆ.

ಮನೆ ಮಾಲೀಕೆ ಅನಾರೋಗ್ಯದ ಕಾರಣ ಅದೇ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಗ ಮನೆ ಕೆಲಸದಾಕೆ ಬಣ್ಣ ಬಯಲಾಗಿದೆ. ಪಾತ್ರೆ ತೊಳೆಯುವ ಕೆಲಸ ಮಾಡ್ತಿದ್ದ ಮಹಿಳೆ ಜನವರಿ 19,2018 ರಂದು ಮನೆ ಕೆಲಸ ಬಿಟ್ಟಿದ್ದಳು. ಮಂದೀಪ್ ಕೌರ್ ರೇಣುಕಾ ಎಂಬಾಕೆಯ ಎಂಬಿಬಿಎಸ್ ಸರ್ಟಿಫಿಕೇಟ್ ಕದ್ದಿದ್ದಳು.

ಬೇರೆ ಕೆಲಸವಿದೆ. ಇನ್ಮುಂದೆ ಪಾತ್ರೆ ತೊಳೆಯಲು ಬರುವುದಿಲ್ಲವೆಂದು ಮಂದೀಪ್ ಹೇಳಿದ್ದಳಂತೆ. ನಾಲ್ಕೈದು ದಿನಗಳ ಹಿಂದೆ ರೇಣುಕಾ ಕೌರ್ ತಾಯಿ ಆರೋಗ್ಯ ಹದಗೆಟ್ಟಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಮಗಳ ಹೆಸರನ್ನು ಕೂಗಿದ್ದಾರೆ. ಆಗ ನಕಲಿ ವೈದ್ಯೆ ಮಂದೀಪ್ ಮಾಲೀಕೆ ಮುಂದೆ ಬಂದಿದ್ದಾಳೆ. ಆಕೆಯನ್ನು ಮಾಲೀಕೆ ತಕ್ಷಣ ಗುರುತಿಸಿದ್ದಾಳೆ.

ಇದೇ ಸಂದರ್ಭದಲ್ಲಿ ಅಮೆರಿಕಾದಿಂದ ವಾಪಸ್ ಬಂದ ರೇಣುಕಾ ತನ್ನ ಸರ್ಟಿಫಿಕೇಟ್ ಕಾಣೆಯಾಗಿರುವುದಾಗಿ ಹೇಳಿದ್ದಾಳೆ. ಈ ಸಂಬಂಧ ರೇಣುಕಾ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಾರಣೆ ವೇಳೆ ಮಂದೀಪ್ ಸತ್ಯ ಬಾಯ್ಬಿಟ್ಟಿದ್ದಾಳೆ. ಈಕೆ ಎಷ್ಟರ ಮಟ್ಟಿಗೆ ಔಷಧಿ ಹೆಸರನ್ನು ಸ್ಪಷ್ಟವಾಗಿ ಹೇಳಬಲ್ಲಳು? ಯಾವುದೇ ಪೂರ್ವಾಪರ ತಿಳಿಯದೆ ಆಸ್ಪತ್ರೆ ಸಿಬ್ಬಂದಿ ಮಂದೀಪ್ ಳನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದಾರೆ. ಈ ಬಗ್ಗೆಯೂ ಪೊಲೀಸರು ತನಿಖೆ ಶುರುಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...