alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಬಾರಿ ಶುರುವಾಗಿದೆ ಮಿಲಿಟರಿ ಪ್ರವಾಸೋದ್ಯಮ

army

ಮಹಾರಾಷ್ಟ್ರದ ಸೇನಾ ಕ್ಷೇಮಾಭಿವೃದ್ಧಿ ಇಲಾಖೆಯಲ್ಲಿ ಮಿಲಿಟರಿ ಪ್ರವಾಸೋದ್ಯಮವನ್ನು ಆರಂಭಿಸಲಾಗಿದೆ. ಇದು ದೇಶದ ಮೊದಲ ಪ್ರಯೋಗವಾಗಿದೆ. ಯುವಜನತೆಯನ್ನು ಮಿಲಿಟರಿ ಕಡೆ ಆಕರ್ಷಿಸೋದು, ಸೇನೆಯ ದೈನಂದಿನ ಕೆಲಸದ ಬಗ್ಗೆ ಅರಿತುಕೊಳ್ಳುವಂತೆ ಮಾಡುವ ಜೊತೆಗೆ ಮಾಜಿ ಸೈನಿಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಮಿಲಿಟರಿ ಪ್ರವಾಸೋದ್ಯಮ ಇಲಾಖೆಯ ಉದ್ದೇಶವಾಗಿದೆ.

ಜಮ್ಮು-ಕಾಶ್ಮೀರ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಮಯನ್ಮಾರ್ ಗಡಿಯಲ್ಲಿ ಯಾವ ರೀತಿ ಭದ್ರತೆ ಒದಗಿಸಲಾಗುತ್ತದೆಂಬುದನ್ನು ನೋಡುವ ಅವಕಾಶ ಸಿಗಲಿದೆ. ಮಿಲಿಟರಿ ತರಬೇತಿ ಕೇಂದ್ರ, ವಸ್ತು ಸಂಗ್ರಹಾಲಯ, ಸೇನೆಯ ಪ್ರಮುಖ ಮೂರು ಕೇಂದ್ರ, ಗಡಿ ಪ್ರದೇಶಗಳನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಸಿಗಲಿದೆ.

ಒಂದರಿಂದ ಏಳನೆ ತರಗತಿ ವಿದ್ಯಾರ್ಥಿಗಳು ಮೂರು ದಿನ, ಎಂಟರಿಂದ 10 ನೇ ತರಗತಿ ವಿದ್ಯಾರ್ಥಿಗಳು ನಾಲ್ಕು ದಿನ, ಕಾಲೇಜ್ ವಿದ್ಯಾರ್ಥಿಗಳು ಏಳು ದಿನ ಮತ್ತು ಕಾರ್ಪೋರೇಷನ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು 10 ದಿನ ಇಲ್ಲಿನ ಪ್ರದೇಶಗಳನ್ನು ವೀಕ್ಷಿಸಬಹುದಾಗಿದೆ. ಕಡಿಮೆ ಬೆಲೆಗೆ ಊಟ, ವಸತಿ ಸೌಲಭ್ಯ ಪ್ರವಾಸಿಗರಿಗೆ ಸಿಗಲಿದೆ.

ಈಗಾಗಲೇ ಪ್ರವಾಸಿಗರು ಬುಕ್ಕಿಂಗ್ ಶುರುಮಾಡಿದ್ದಾರೆ. ಮಹಾರಾಷ್ಟ್ರದ ಸೇನಾ ಕ್ಷೇಮಾಭಿವೃದ್ಧಿ ಇಲಾಖೆಯ ವೆಬ್ ಸೈಟ್ ಗೆ ಹೋಗಿ ಇಲ್ಲ ಕಚೇರಿಗೆ ಹೋಗಿ ಸಮಯ ನಿಗದಿ ಮಾಡಿಕೊಳ್ಳಬೇಕಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...