alex Certify
ಕನ್ನಡ ದುನಿಯಾ       Mobile App
       

Kannada Duniya

ತಂತ್ರ-ಮಂತ್ರಕ್ಕೆ ಬಲಿಯಾಯ್ತು 2 ವರ್ಷದ ಮಗು

ಮಹಾರಾಷ್ಟ್ರದಲ್ಲಿ ತಂತ್ರ-ಮಂತ್ರಕ್ಕೆ 2 ವರ್ಷದ ಮಗು ಬಲಿಯಾಗಿದೆ. ಪಕ್ಕದ ಮನೆಯವರು ಎರಡು ವರ್ಷದ ಮಗುವನ್ನು ಬಲಿ ಪಡೆದಿದ್ದಾರೆ. ಘಟನೆ ಬ್ರಹ್ಮಪುರಿಯಲ್ಲಿ ನಡೆದಿದೆ.

ಆಗಸ್ಟ್ 22ರಂದು ಮನೆಯ ಹೊರಗೆ ಆಡ್ತಿದ್ದ ಮಗು ನಾಪತ್ತೆಯಾಗಿತ್ತು. ಪಾಲಕರು ಪೊಲೀಸರಿಗೆ ದೂರು ನೀಡಿದ್ದರು. ಸುತ್ತಮುತ್ತ ಊರಿನಲ್ಲೂ ಮಗು ನಾಪತ್ತೆಯಾದ ಪೋಸ್ಟರ್ ಹಾಕಲಾಗಿತ್ತು. ಪೊಲೀಸ್ ತನಿಖೆ ಚುರುಕುಗೊಳಿಸಿದ್ದರು. ಆದ್ರೆ ಮಗುವಿನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಈ ಮಧ್ಯೆ ಪಕ್ಕದ ಮನೆಯವರ ಬಗ್ಗೆ ಮಗುವಿನ ತಂದೆ ಸಂಶಯ ವ್ಯಕ್ತಪಡಿಸಿದ್ದ. ಆತನ ಮಾಹಿತಿ ಮೇರೆಗೆ ಪೊಲೀಸರು ಪಕ್ಕದ ಮನೆ ಮೇಲೆ ದಾಳಿ ನಡೆಸಿದ್ದರು. ಆಗ ಮಗುವಿನ ಶವ ಪತ್ತೆಯಾಗಿದೆ. ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.  ಮಗು ಹತ್ಯೆ ನಂತ್ರ ನದಿಗೆಸೆಯುವ ಪ್ಲಾನ್ ಮಾಡಿದ್ದರಂತೆ. ಆದ್ರೆ ಅದು ಸಾಧ್ಯವಾಗದ ಕಾರಣ ಹುಲ್ಲಿನಲ್ಲಿ ಮುಚ್ಚಿಟ್ಟಿದ್ದರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...