alex Certify
ಕನ್ನಡ ದುನಿಯಾ       Mobile App
       

Kannada Duniya

ತಡೆಯಲು ಬಂದ ಟ್ರಾಫಿಕ್ ಪೇದೆಯನ್ನೇ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಚಾಲಕ

ಥಾಣೆ: ತಪ್ಪಾದ ಮಾರ್ಗದಲ್ಲಿ ಕಾರು ಚಲಾಯಿಸಿದ ಚಾಲಕನೊಬ್ಬ ತಡೆಯಲು ಬಂದ ಪೊಲೀಸ್ ಪೇದೆಯನ್ನು ತನ್ನ ಕಾರಿನ ಬಾನೆಟ್‌ ಮೇಲೆ ಹೊತ್ತೊಯ್ದ ಆಘಾತಕಾರಿ ಘಟನೆ ನಡೆದಿದೆ.

ಇಂತದೊಂದು ಘಟನೆ ಮಹಾರಾಷ್ಟ್ರದ ಥಾಣೆಯ ಟೀನ್‌ ಹಾತ್‌ ನಾಕ ಪ್ರದೇಶದಲ್ಲಿ ನಡೆದಿದ್ದು, ಕಾರು ಚಾಲಕ ಜಿಮಿತ್‌ ಮೆಹ್ತಾನನ್ನು ಪೊಲೀಸರು ಬಂಧಿಸಿದ್ದಾರೆ.

ನಿರ್ಬಂಧಿತ ಮಾರ್ಗದಲ್ಲಿ ಕಾರು ಚಲಾಯಿಸಿದ ಮೆಹ್ತಾ ಎಂಬಾತನಿಗೆ ಕಾರು ನಿಲ್ಲಿಸುವಂತೆ ಪೊಲೀಸ್‌ ಪೇದೆ ಅಡ್ಡ ಬಂದಿದ್ದಾರೆ. ಆದರೆ ಆತ ಕಾರು ನಿಲ್ಲಿಸುವ ಬದಲಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಈ ವೇಳೆ ಪೇದೆ ಕಾರಿನ ಬಾನೆಟ್‌ ಮೇಲೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಉಳಿದ ಪೊಲೀಸರು ಕಾರಿನ ದಾರಿಯತ್ತ ಬ್ಯಾರಿಕೇಡ್ ತಳ್ಳಿದ್ದಾರೆ. ದಾರಿ ಬಂದ್‌ ಆದ ಹಿನ್ನೆಲೆಯಲ್ಲಿ ಕಾರು ನಿಂತಿದೆ. ಕಾರಿನ ಬಾನೆಟ್‌ ಮೇಲೆ ಪೇದೆ ಸ್ವಲ್ಪ ದೂರ ಸಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...