alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಸ್ಥಳದಲ್ಲಿ ಇದನ್ನು ಮಾಡಿದರೆ ಕಟ್ಟಬೇಕು ದಂಡ

ಎಚ್ಚರ….ಪಾನ್‌ ತಿನ್ನುವವರು, ಮನೆಯಲ್ಲಿ ಶೌಚಾಲಯ ಇಲ್ಲದವರು, ಸಿಕ್ಕಸಿಕ್ಕಲ್ಲಿ ಕಸ ಎಸೆಯುವವರು ತಮ್ಮ ದೈನಂದಿನ ಖರ್ಚಿಗೆ ಸ್ವಲ್ಪ ಹೆಚ್ಚು ಹಣ ಸೇರಿಸಿಕೊಳ್ಳಿ! ಮಹಾರಾಷ್ಟ್ರ ರಾಜ್ಯದಲ್ಲಿ ಇನ್ನು ಸ್ವಚ್ಛತೆ ಹಾಳು ಮಾಡಿದರೆ, ದಂಡ ಕಟ್ಟಬೇಕಾಗುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದು, ಉಗುಳುವುದು, ಬಯಲು ಶೌಚ ಮಾಡಿದರೆ 150-500 ರೂ. ವರೆಗೆ ದಂಡ ವಿಧಿಸಲು ಸರಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಕೈಯಲ್ಲಿರುವ ನಗರಾಭಿವೃದ್ಧಿ ಇಲಾಖೆ ಈ ಆದೇಶ ಹೊರಡಿಸಿದ್ದು, ಬಯಲು ಶೌಚಕ್ಕೆ 500 ರೂ., ಕಸ ಎಸೆದರೆ 180 ರೂ. ಹಾಗೂ ಉಗುಳಿದರೆ 150 ರೂ. ದಂಡ ಹಾಕಲು ಆದೇಶದಲ್ಲಿ ತಿಳಿಸಿದೆ.

ಇಷ್ಟು ಮಾತ್ರವಲ್ಲದೆ ನಗರದ ವಿವಿಧ ಭಾಗಗಳನ್ನು ವಿಂಗಡಿಸಲಾಗಿದ್ದು, ಆಯಾ ಸ್ಥರದ ಪ್ರದೇಶಗಳಿಗೆ ಅನುಗುಣವಾಗಿ ದಂಡದ ಮೊತ್ತವೂ ಬದಲಾವಣೆ ಮಾಡಲು ಚಿಂತಿಸಲಾಗಿದೆ.

ಸ್ಥಳೀಯ ಸಂಸ್ಥೆಗಳು ಘನ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಶೇ.100 ರಷ್ಟು ಕಸ ವಿಂಗಡಣೆ ಮಾಡಬೇಕು. ಈ ಮೂಲಕ ಸ್ವಚ್ಛತೆಗೆ ಪ್ರಾಧಾನ್ಯತೆ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆ.31ರಂದು ಸುಪ್ರೀಂಕೋರ್ಟ್, ತ್ಯಾಜ್ಯ ನಿರ್ವಹಣೆ ಸಂಬಂಧ ಸೂಕ್ತ ನೀತಿ ರೂಪಿಸದೇ ಇರುವುದಕ್ಕೆ ಗರಂ ಆಗಿತ್ತು. ಈ ಸಂಬಂಧ ಇದೀಗ ಸರಕಾರ ಎಚ್ಚೆತ್ತುಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...