alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ತಾಯಿಯ ಹೃದಯವನ್ನೇ ತಿಂದ ಮಗ

ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಗನೇ ತಾಯಿಯನ್ನು ಕೊಂದು ಆಕೆಯ ಹೃದಯವನ್ನು ತಿಂದಿದ್ದಾನೆ.

ಕೊಲ್ಲಾಪುರದಲ್ಲಿ ಕೂಲಿಕಾರ್ಮಿಕನಾಗಿರುವ ಸುನಿಲ್ ಕುಚಕರ್ಣಿ ಇಂತಹ ಘೋರ ಕೃತ್ಯವೆಸಗಿದ ಆರೋಪಿ. ತರರಾನಿ ಚೌಕ್ ನ ಮಹಾವಾಲಾ ನಿವಾಸಿಯಾಗಿರುವ ಸುನಿಲ್ ತನ್ನ 65 ವರ್ಷದ ತಾಯಿ ಯಲ್ಲವ್ವಳನ್ನು ಕೊಂದು ಹೀಗೆ ಮಾಡಿದ್ದಾನೆ.

ಮದುವೆಯಾಗಿ ಮೂವರು ಮಕ್ಕಳನ್ನು ಹೊಂದಿರುವ ಆರೋಪಿ ಪತ್ನಿ, ಮಕ್ಕಳಿಂದ ದೂರವಾಗಿ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ.

ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಆತ ಮದ್ಯಪಾನ ಮಾಡಿ ಮನೆಗೆ ಬಂದಿದ್ದು, ಹಸಿವಾಗಿದೆ ಊಟ ಕೊಡು ಎಂದು ತಾಯಿಯೊಂದಿಗೆ ಜಗಳವಾಡಿದ್ದಾನೆ.

ಜಗಳ ವಿಕೋಪಕ್ಕೆ ತಿರುಗಿ ತಾಯಿಯನ್ನೇ ಕೊಂದು ಆಕೆಯ ದೇಹದಿಂದ ಹೃದಯ ತೆಗೆದು, ಅದಕ್ಕೆ ಉಪ್ಪು ಖಾರ ಹಾಕಿ ತಿಂದಿದ್ದಾನೆ ಎಂದು ಶಂಕಿಸಲಾಗಿದೆ.

ರಕ್ತಸಿಕ್ತ ಬಟ್ಟೆಗಳೊಂದಿಗೆ ಮನೆಯಿಂದ ಹೊರ ಬಂದ ಈತನನ್ನು ಕಂಡು ಗಾಬರಿಯಾದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಶಾಹಪುರಿ ಠಾಣೆ ಪೊಲೀಸರು ಮನೆಯೊಳಗೆ ಪರಿಶೀಲನೆ ನಡೆಸಿದಾಗ, ಮಸಾಲೆ ಪದಾರ್ಥಗಳನ್ನು ಹಾಕಿದ್ದ ಅರ್ಧ ಹೃದಯ ಕಂಡು ಬಂದಿದೆ ಎಂದು ಶಾಹಪುರಿ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಸಂಜಯ್ ಮೋರೆ ತಿಳಿಸಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ. ಆತನೇ ತಾಯಿ ಹೃದಯವನ್ನು ತಿಂದಿರಬಹುದೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...