alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಟಿಗಾಗಿ ಕ್ಯಾತೆ ತೆಗೆದು ರೈಲು ನಿಲ್ಲಿಸಿದ ಶಾಸಕ

shiva sena mla newsಕೆಲ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕವಾಗಿಯೇ ಎಂತಹ ದುರಂಹಕಾರಿ ವರ್ತನೆ ತೋರುತ್ತರೆಂಬುದಕ್ಕೆ ಈ ಪ್ರಕರಣ ಉದಾಹರಣೆ. ಶಾಸಕನೊಬ್ಬ ರೈಲು ಪ್ರಯಾಣದ ವೇಳೆ ತಾನು ಬಯಸಿದ ಸೀಟ್ ಸಿಗಲಿಲ್ಲವೆಂಬ ಕಾರಣಕ್ಕೆ ಗಂಟೆಗಳ ಕಾಲ ರೈಲನ್ನು ವಿಳಂಬಗೊಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದ ಶಿವಸೇನಾ ಶಾಸಕ ಹೇಮಂತ್ ಪಾಟೀಲ್ ತಮ್ಮ ಸ್ವಕ್ಷೇತ್ರಕ್ಕೆ ತೆರಳಲು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಗೆ ಬಂದಿದ್ದು, ದೇವಗಿರಿ ಎಕ್ಸ್ ಪ್ರೆಸ್ ನ ಎಸಿ 2 ಕೋಚ್ ನಲ್ಲಿ ಅವರಿಗೆ ಸೀಟು ನಿಗದಿಯಾಗಿತ್ತು. ಆದರೆ ತಮಗೆ ಸಿಕ್ಕ ಕಿಟಕಿ ಪಕ್ಕದ ಸೀಟು ಬದಲಿಸುವಂತೆ ತಿಳಿಸಿದ್ದಾರೆ.

ಇದಕ್ಕೆ ಮನ್ನಣೆ ಸಿಗದೆ ಇದ್ದಾಗ ತಮ್ಮ ಬೆಂಬಲಿಗರ ಜೊತೆ ಸೇರಿ ತಮಗೆ ಸೂಕ್ತ ಸೀಟು ಸಿಗುವವರೆಗೂ ರೈಲು ಹೊರಡಲು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಸುಮಾರು 2 ಸಾವಿರ ಮಂದಿ ಪ್ರಯಾಣಿಕರು  ಹೈರಾಣಾಗಿದ್ದಾರೆ. ಸುಮಾರು 1 ಗಂಟೆಗಳ ಕಾಲ ಈ ಹೈಡ್ರಾಮಾ ನಡೆದಿದ್ದು, ಅಲ್ಲದೇ ನಾಲ್ಕು ಎಕ್ಸ್ ಪ್ರೆಸ್ ರೈಲುಗಳೂ ಈ ಕಾರಣಕ್ಕಾಗಿ ವಿಳಂಬವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...