alex Certify
ಕನ್ನಡ ದುನಿಯಾ       Mobile App
       

Kannada Duniya

‘ವಿಜಯ್ ಮಲ್ಯ ರೀತಿಯಲ್ಲೇ ನನ್ನ ಸಾಲ ಮನ್ನಾ ಮಾಡಿ’

sbi-letter

ಮುಂಬೈ: ಉದ್ಯಮಿ ವಿಜಯ್ ಮಲ್ಯ ಅವರ ಸಾಲವನ್ನು ಮನ್ನಾ ಮಾಡಿದ ರೀತಿಯಲ್ಲೇ, ನನ್ನ ಸಾಲವನ್ನೂ ಮನ್ನಾ ಮಾಡಬೇಕೆಂದು ಪೌರ ಕಾರ್ಮಿಕನೊಬ್ಬ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಪತ್ರ ಬರೆದಿದ್ದಾನೆ.

ವಿಜಯ್ ಮಲ್ಯ ವಿವಿಧ ಬ್ಯಾಂಕ್ ಗಳಿಗೆ ಸುಮಾರು 9000 ಕೋಟಿ ರೂ ಸಾಲ ಕೊಡಬೇಕಿದ್ದು, ವಿದೇಶಕ್ಕೆ ಪರಾರಿಯಾಗಿದ್ದಾರೆ. ಅವರ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸೇರಿದ 1201 ಕೋಟಿ ರೂ. ಸಾಲವನ್ನು ವಸೂಲಾಗದ ಪುಸ್ತಕಕ್ಕೆ ಎಸ್.ಬಿ.ಐ. ಸೇರಿಸಿದೆ. ಹೀಗೆ ವಿಜಯ್ ಮಲ್ಯ ಅವರ ಸಾಲ ಮನ್ನಾ ಮಾಡಿದಂತೆ ನನ್ನ 1.5 ಲಕ್ಷ ರೂಪಾಯಿ ಸಾಲವನ್ನು ಮನ್ನಾ ಮಾಡುವಂತೆ ನಾಸಿಕ್ ಪೌರ ಕಾರ್ಮಿಕ  ಭಾವುರಾವ್ ಸೋನಾವನ ಪತ್ರ ಬರೆದಿದ್ದಾರೆ.

ತಮ್ಮ ಮಗನ ಅನಾರೋಗ್ಯದ ಕಾರಣದಿಂದ ಎಸ್.ಬಿ.ಐ.ನಲ್ಲಿ ಸಾಲ ಪಡೆದುಕೊಂಡಿದ್ದು, ಅದನ್ನು ಮನ್ನಾ ಮಾಡಬೇಕೆಂದು ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...