alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾರಾಷ್ಟ್ರದ ರಸ್ತೆಯಲ್ಲಿ ಹಾಲಿನ ಹೊಳೆ…!

ಮಹಾರಾಷ್ಟ್ರದಲ್ಲಿ  ಹಾಲಿನ ಚಳುವಳಿ ಸೋಮವಾರದಂದು ಪ್ರಾರಂಭವಾಗಿ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. ಮಹಾರಾಷ್ಟ್ರದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಮುಖ್ಯಸ್ಥ ರಾಜು ಶೆಟ್ಟಿ ಮತ್ತು ಅವರ ಸಂಘಟನೆಯ ಕಾರ್ಯಕರ್ತರು ಚಳುವಳಿ ಮಾಡುತ್ತಿದ್ದು, ಹಾಲಿನ ಟ್ಯಾಂಕರ್ ಗಳಿಗೆ ಮುತ್ತಿಗೆ ಹಾಕುತ್ತಿದ್ದಾರೆ.

ಹಾಲಿನ ಉತ್ಪಾದನೆ ಮಾಡುವ ರೈತರಿಗೆ ಸೂಕ್ತ ಬೆಲೆ ದೊರಕಿಸಿಕೊಡಲು ಈ ಹೋರಾಟ ಆರಂಭವಾಗಿದೆ. ಸಂಘಟನೆಯ ಕಾರ್ಯಕರ್ತರು ನಾಗಪುರ್-ಅಮರಾವತಿ ಹೈವೇಯಲ್ಲಿ ಸಂಚರಿಸುವ ಹಾಲಿನ ಟ್ಯಾಂಕರ್ ಗಳನ್ನು ತಡೆದು ಅವುಗಳ ಟೈರಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಟ್ಯಾಂಕರ್ ನಲ್ಲಿದ್ದ ಹಾಲನ್ನು ರಸ್ತೆಗೆ ಸುರಿದಿದ್ದಾರೆ.

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಮಹಾರಾಷ್ಟ್ರದಲ್ಲಿ ರೈತರು ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದು, ಇದಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಹಾಲಿಗೆ 35 ರೂಪಾಯಿ ನಿಗದಿಯಾಗಿದ್ದು, ಆಕಳ ಹಾಲು ಪ್ರತಿ ಲೀಟರ್ ಗೆ 42 ರೂ. ಹಾಗೂ ಎಮ್ಮೆ ಹಾಲಿಗೆ ಪ್ರತಿ ಲೀಟರ್ ಗೆ 50 ರೂ. ಇದೆ. ಆದರೆ ರೈತರಿಗೆ ಪ್ರತಿ ಲೀಟರ್ ಗೆ 14  ರಿಂದ 18 ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...